ಚಿಕ್ಕಮಗಳೂರು ವ್ಯಕ್ತಿ ಸಾವು
ಭಟ್ಕಳ: ಇಲ್ಲಿನ ಕೆಎಸ್ಆರ್ಟಿಸಿ ಡಿಪೋದಲ್ಲಿ ಬುಧವಾರ ರಾತ್ರಿ ಕಂಡಕ್ಟರ್ ಒಬ್ಬನಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತಪಟ್ಟ ಕಂಡಕ್ಟರ್ ಮಂಜುನಾಥ ಚೆನ್ನಭೋವಿ (30) ಚಿಕ್ಕಮಗಳೂರು.
ಡ್ಯೂಟಿಗೆ ತೆರಳಲು ತಯಾರಾದಾಗ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದ್ದರಿಂದ ಈತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕನ ವಿರುದ್ಧ ಡಿಪೋ ವ್ಯವಸ್ಥಾಪಕ ದೂರು ನೀಡಿದ್ದಾರೆ.