ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಮನವಿ
ಶೃಂಗೇರಿ: ಅಂಗನವಾಡಿ ಕಾರ್ಯಕರ್ತೆಯರು ಗೌರವಧನ ಹೆಚ್ಚಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಸಪ್ಪ ಬಂಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ವಿವಿಧ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗಿದೆ. ಈ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿ ಗೌರವಧನ ಹೆಚ್ಚಿಸುವ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್. ಜೀವರಾಜ್, ಜಿಪಂ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎ.ಎಸ್. ನಯನ, ಜಿಪಂ ಸದಸ್ಯ ಶಿವಶಂಕರ್, ಅಂಗನವಾಡಿ ಕಾರ್ಯಕರ್ತೆಯರ ತಾಲೂಕು ಘಟಕದ ಅಧ್ಯಕ್ಷೆ ರಮಾದೇವಿ,ಚಿಕ್ಕಮಗಳೂರು ತಾಲೂಕು ಅಧ್ಯಕ್ಷೆ ಲೀಲಾ ಧರ್ಮಮ್ಮ, ಶೃಂಗೇರಿಯ ಇಂದ್ರಾಣಿ, ಸುಧಾ, ಕೊಪ್ಪ ತಾಲೂಕಿನ ಅಧ್ಯಕ್ಷೆ ವಿದ್ಯಾಶಾಲಿನಿ, ಐರೀನ್ ಡೇಸಾ, ರೇಣುಕಾ ರತ್ನರಾಜ್, ರೇಣುಕಾ ಪ್ರಸಾದ್, ನರಸಿಂಹಪುರ ತಾಲೂಕಿನ ಅಧ್ಯಕ್ಷೆ ಚಂದ್ರಾವತಿ, ಪ್ರೇಮ, ಸುಜಾತ ನಿಯೋಗದಲ್ಲಿದ್ದರೆಂದು ಮೆಣಸೆಯಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಸಭೆಯಲ್ಲಿ ಅಧ್ಯಕ್ಷೆ ರಮಾದೇವಿ ತಿಳಿಸಿದರು.