ತಾ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಟ್ಟನಹಳ್ಳಿ ಮಹೇಶ್
ಕಡೂರು: ತಾಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಚನಕಾರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಟ್ಟನಹಳ್ಳಿ ಮಹೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ತಾಲೂಕು ಕನ್ನಡ ಕಸಾಪ ಘಟಕದ ಕಾರ್ಯಕಾರಿ ಸಮಿತಿಯು ಕಡೂರಿನ ಕನ್ನಡ ಭವನದಲ್ಲಿ ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಸಮ್ಮೇಳನಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಫೆಬ್ರವರಿ 2 ಅಥವಾ 3ನೇ ವಾರದಲ್ಲಿ ಸಮ್ಮೇಳನವನ್ನು ಜಿಲ್ಲೆಯ ಹೆಮ್ಮೆಯ ಮಹಾಕವಿ ಲಕ್ಷ್ಮೀಶನ ಜನ್ಮಸ್ಥಳವಾದ ದೇವನೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಕಸಾಪ ಘಟಕದ ಸದಸ್ಯರಾದ ಡಾ ಸುರೇಂದ್ರನಾಥ್, ಸವಿತಾ ಸತ್ಯನಾರಾಯಣ, ಸಾವಿತ್ರಿ ಗಂಗಪ್ಪ, ಜಿಲ್ಲಾ ಸಂಚಾಲಕ ಕೆ.ಜಿ. ಶ್ರೀನಿವಾಸಮೂರ್ತಿ,ಕೆ.ಎಂ. ಪುಟ್ಟಪ್ಪ, ಜನರಲ್ ತಿಮ್ಮಯ್ಯ, ವೈ.ಕೆ. ರಂಗಪ್ಪ ಉಪಸ್ಥಿತರಿದ್ದರು. ಆನಂದಮೂರ್ತಿ ಸ್ವಾಗತಿಸಿದರು. ಕೆ.ವಿರೂಪಾಕ್ಷಪ್ಪ ನಿರೂಪಿಸಿದರು. ಕೆ. ಎಂ. ಪುಟ್ಟಪ್ಪ ವಂದಿಸಿದರು.