ಬೆಂಕಿ ಆಕಸ್ಮಿಕ: ಹುಲ್ಲು ತುಂಬಿದ ಲಾರಿ ಭಸ್ಮ
ನರಸಿಂಹರಾಜಪುರ: ಹುಲ್ಲು ತುಂಬಿದ ಲಾರಿಗೆ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಲಾರಿ ಹಾಗೂ ಹುಲ್ಲು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಕಾನೂರು ಗ್ರಾಮದ ಗದ್ದೆಯ ಮನೆಯಲ್ಲಿ ಭಾನುವಾರ ಸಂಜೆ 2 ಗಂಟೆಯ ಸುಮಾರಿಗೆ ನಡೆದಿದೆ.
ಕೊಪ್ಪಕ್ಕೆ ಸೇರಿದ ಲಾರಿಯೊಂದು ಹುಲ್ಲನ್ನು ತೆಗೆದುಕೊಂಡು ಹೋಗಲು ಗದ್ದೆ ಮನೆಯ ಶ್ರೀನಿವಾಸಮೂರ್ತಿ ಎಂಬ ರೈತರೊಬ್ಬರ ಮನೆಗೆ ಬಂದಿತ್ತು.ಮನೆಯ ಸಮೀಪದ ಕಣದಲ್ಲಿದ್ದ ಹುಲ್ಲನ್ನು ತುಂಬಿಸಿಕೊಂಡು ವಾಪಾಸು ಹೊರಟಾಗ ಲಾರಿಯ ಮೇಲಿದ್ದ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಆರಿಸಲು ಸಾದ್ಯವಾಗದೆ ತಕ್ಷಣ ಕೊಪ್ಪ ಅಗ್ನಿ ಶ್ಯಾಮಕ ದಳಕ್ಕೆ ದೂರವಾಣಿ ಮೂಲಕ ತಿಳಿಸಲಾಯಿತು.
ಸ್ಥಳಕ್ಕೆ 2 ಅಗ್ನಿಶಾಮಕ ದಳಗಳು ಆಗಮಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗದೆ ಲಾರಿ ಮತ್ತು ಸಂಪೂರ್ಣ ಸುಟ್ಟುಹೋಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಲಾರಿಯಲ್ಲಿ ಅಂದಾಜು 40 ಸಾವಿರ ರುಪಾಯಿ ಮೌಲ್ಯದ 2 ಸಾವಿರ ಹುಲ್ಲಿನ ಪಿಂಡಿಗಳು ಇತ್ತು.