ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ
ಶೃಂಗೇರಿ: ಮಲೆನಾಡು ಮಕ್ಕಳ ಮಿತ್ರ ಸಂಘಟನೆ ಆಶ್ರಯದಲ್ಲಿ ವಿದ್ಯಾರಣ್ಯಪುರ ಪಂಚಾಯಿತಿ ತ್ಯಾವಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ತಾಲೂಕಿನ ವಿವಿಧ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಮುಖಂಡ ಮೊಹಮ್ಮದ್ ಹನೀಫ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಾಪಕ ಆನಂದ ಅಪ್ಪುಗೊಳ, ಚಿತ್ರನಟಿ ವೀಣಾ ಪಲ್ಲಪ್ಪ, ಕೆಜೆಪಿ ರಾಜ್ಯ ಘಟಕದ ಧನಂಜಯಕುಮಾರ್, ಬಾಳೆಮನೆ ನಟರಾಜ್, ಕೆ.ಜಿ. ವೆಂಕಟೇಶ್, ಜಿಪಂ ಸದಸ್ಯ ಶಿವಶಂಕರ್, ಪಪಂ ಅಧ್ಯಕ್ಷ ಪರಾಶರ ಮತ್ತಿತರರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.