ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆದಿ ಪರಾಶಕ್ತಿ ದೇವಿ ವಾರ್ಷಿಕ ಉತ್ಸವ

Lingaraj Badiger
Updated On : 23 Jan 2013, 10:49 am

ಚಿಕ್ಕಮಗಳೂರು: ಮೇಲ್ ಮರವತ್ತೂರು ಶ್ರೀ ಆದಿ ಪರಾಶಕ್ತಿ ದೇವಿಯ ವಾರ್ಷಿಕ ಉತ್ಸವ ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಮಂಗಳವಾರ ವೈಭವದಿಂದ ಜರುಗಿತು.
ಉತ್ಸವದ ಅಂಗವಾಗಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ, ಭಕ್ತರಿಂದ ಸಾಮೂಹಿಕ ಭಜನೆ ನಡೆದವು. ನಂತರ ಮೇಲ್ ಮರವತ್ತೂರು ಯಾತ್ರೆಗೆ ತೆರಳುವ ಭಕ್ತಾಧಿಗಳಿಗೆ ಇರುಮುಡಿಯನ್ನು ಕಟ್ಟಲಾಯಿತು.
ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ವೆಂಕಟೇಶ್, ಮಾನಸಿಕ ನೆಮ್ಮದಿ ಮತ್ತು ಶಾಂತಿಗೆ ದೇವಾಲಯಗಳು ಸಹಕಾರಿ ಎಂದರು.
ದೇವಾಲಯದ ಗುರುಸ್ವಾಮಿ ವಿ. ಧರ್ಮೇಶ್ ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ಸಧ್ಯದಲ್ಲೇ ಶ್ರೀ ಮೇಲ್ ಮರವತ್ತೂರು ಆದಿ ಪರಾಶಕ್ತಿ ದೇವಿಯ ದೇವಾಲಯವನ್ನು ನಿರ್ಮಿಸುತ್ತಿದ್ದು, ಭಕ್ತರು ಸಹಕಾರ ನೀಡುವಂತೆ ಮನವಿ ಮಾಡಿದರು. ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಮರ್ಲೆ ಅಣ್ಣಯ್ಯ, ರಾಜು, ಶಕ್ತಿವೇಲ್, ಹೊನ್ನಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement