ಮೀನುಗಾರರ ಸ್ವಸಹಾಯ ಸಂಘಗಳಿಗೆ 1ಲಕ್ಷ ಸಾಲ
ಚಿಕ್ಕಮಗಳೂರು: ಮೇದರಹಳ್ಳಿ ಮೀನುಗಾರಿಕೆ ಸಹಕಾರ ಸಂಘದಿಂದ ಮೀನುಗಾರರ 14 ಸ್ವಸಹಾಯ ಸಂಘಗಳಿಗೆ ತಲಾ 1ಲಕ್ಷ ಸಾಲ ವಿತರಿಸಲಾಗಿದೆ ಎಂದು ಅಧ್ಯಕ್ಷ ಎನ್.ಆರ್. ಮಂಜುನಾಥ್ ಹೇಳಿದ್ದಾರೆ.
ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಬಿಸ್ಮಿಲ್ಲಾ ಮಹಿಳಾ ಮೀನುಗಾರರ ಸ್ವಸಹಾಯ ಸಂಘಕ್ಕೆ 1ಲಕ್ಷದ ಚೆಕ್ ವಿತರಿಸಿ ಮಾತನಾಡಿ, ಈ ಸಹಕಾರ ಸಂಘದಲ್ಲಿ ಮೀನುಗಾರರ 17 ಸ್ವಸಹಾಯ ಗುಂಪುಗಳಿದ್ದು, 14 ಗುಂಪುಗಳಿಗೆ ಸಾಲ ನೀಡಿ ಮೀನುಗಾರರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
ಬಲೆ, ದೋಣಿ ಸೇರಿದಂತೆ ಮೀನುಗಾರಿಕೆಗೆ ಬೇಕಾದ ಪರಕರಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದ್ದು, ಮೀನುಗಾರರಿಗೆ ಆಶ್ರಯ ನೀಡುವ ಸಲುವಾಗಿ 400 ಮನೆಗಳನ್ನು ಮಂಜೂರು ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಮಂಜೂರು ಮಾಡುವ ವಿಶ್ವಾಸ ಹೊಂದಿದ್ದು ಸದ್ಯದಲ್ಲೆ ಫಲಾನುಭವಿಗಳಿಗೆ ಹಂಚಲಾಗುವುದು ಎಂದರು.
ಕಾರ್ಯದರ್ಶಿ ಜಿ.ವಿ. ತಾರಾನಾಥ್, ಫರಾಕ್ ಉನ್ನಿಸ್ಸಾ ಇದ್ದರು.