ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಮರಿಗೆ ಉರುಳಿದ ಲಾರಿ: ಮೂವರಿಗೆ ತೀವ್ರ ಗಾಯ

Lingaraj Badiger
Updated On : 24 Jan 2013, 10:49 am

ಕೊಪ್ಪ: ತಾಲೂಕಿನ ಹರಿಹರಪುರದ ಸಮೀಪದ ಸೀಗದಾಳ್ ತಿರುವಿನಲ್ಲಿ ಟಾರ್ ಮಿಶ್ರಿತಾ ಚೆಲ್ಲಿಕಲ್ಲು ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರಿಳಿದ ಪಾರಿಣಾಮ ಲಾರಿಯಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಖಾಸಗಿ ಸಂಸ್ಥೆಗೆ ಸೇರಿದ ಟಿಪ್ಪರ್ ಲಾರಿಯೊಂದರಲ್ಲಿ ತೀರ್ಥಹಳ್ಳಿಯಿಂದ ಟಾರ್ ಮಿಶ್ರಿತ ಚೆಲ್ಲಿಕಲ್ಲನ್ನು ತುಂಬಿಕೊಂಡು ಕೊಪ್ಪ ಮಾರ್ಗವಾಗಿ ಕಾಮಗಾರಿ ನಡೆಯುವ ಸ್ಥಳಕ್ಕೆ ತೆಗೆದು ಕೊಂಡು ಹೋಗುವ ಮಾರ್ಗದಲ್ಲಿ ಎದುರಿಗೆ ಬಂದ ಲಾರಿಗೆ ದಾರಿ ಬಿಡುವ ಸಂದರ್ಭದಲ್ಲಿ  ಈ ಘಟನೆಸಂಭವಿಸಿದೆ. ಲಾರಿಯಲ್ಲಿದ್ದ ಚಾಲಕ ಹಾಲಪ್ಪ, ಪುನೀತ್, ಡಾಲ್ವಿನ್ ಪಿಂಟೋ ತೀವ್ರವಾಗಿ ಗಾಯ ಗೊಂಡಿದ್ದಾರೆ. ಇವರನ್ನು ತಿರ್ಥಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement