ಕ್ರೀಡಾಪಟುಗೆ ಕಪಾಳ ಮೋಕ್ಷ...!
ಮೂಡಿಗೆರೆ: ಶುಕ್ರವಾರ ನಡೆದ ರಾಜ್ಯ ಮಟ್ಟದ ಮಹಿಳಾ ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಕ್ರೀಡಾಪಟುವೊಬ್ಬರಿಗೆ ಜಿಲ್ಲಾ ಪಂಚಾಯಿತ್ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಸಮ್ಮುಖದಲ್ಲಿಯೇ ಕ್ರೀಡಾಪಟುವಿನ ಕೋಚ್ ಕಪಾಳ ಮೋಕ್ಷನಡೆಸಿದ ಘಟನೆ ನಡೆಯಿತು.
ಬಿಜಾಪುರದಿಂದ 20 ಮಹಿಳಾ ಕ್ರೀಡಾಪಟುಗಳನ್ನು ಕೋಚ್ ಕೋರ್ನ್ ಎಂಬಾತನು ಸ್ಪರ್ಧೆ ಪ್ರಾರಂಭಕ್ಕೆ ಕೆಲವೇ ಕ್ಷಣಗಳಿದ್ದಾಗ ಕ್ರೀಡಾಪಟುವೊಬ್ಬರು ಹೆಲ್ಮೆಟ್ ಧರಿಸಿಲ್ಲದಿರುವುದನ್ನು ಜನ ಪ್ರತಿನಿಧಿಗಳು ಪ್ರಶ್ನಿಸಿದರು. ತಕ್ಷಣವೇ ಅಲ್ಲಿಗೆ ಬಂದ ಕೋಚ್ ಕೋರ್ನ್ ಆಕೆಯ ಕೆನ್ನೆಗೆ ಹೊಡೆದು ಏಕೆ ಹೆಲ್ಮೆಟ್ ಧರಿಸಿಲ್ಲಾ ಎಂದು ಪ್ರಶ್ನೆ ಮಾಡಿದರು. ಆಕೆ ನನಗೆ ಹೆಲ್ಮೆಟ್ ನೀಡಿಲ್ಲಾ ಎಂದಾಗ ಕೋಚ್ ಪೆಚ್ಚುಮೊರೆ ಹಾಕಿಕೊಂಡರು.
ತನ್ನದಲ್ಲದ ತಪ್ಪಿಗೆ ಕಪಾಳ ಮೋಕ್ಷ ಮಾಡಿಸಿಕೊಂಡ ಕ್ರೀಡಾಪಟು ಕಣ್ಣಿರಿಡುತ್ತಲೇ ಸ್ಫರ್ಧೆ ಪ್ರಾರಂಭಿಸಿದರು. ಘಟನೆಯ ಕುರಿತಂತೆ ಯಾವೊಬ್ಬ ಜನ ಪ್ರತಿನಿಧಿಗಳು ಮಾತನಾಡದಿದ್ದಾಗ. ಸಾರ್ವಜನಿಕರು ಮಹಿಳಾ ದೌರ್ಜನ್ಯವನ್ನು ಜನಪ್ರತಿನಿದಿಗಳು ತಡೆಯುವ ಕ್ರಮ ಇದೇನಾ ಎಂಬ ಆಕ್ರೋಶ ವ್ಯಕ್ತ ಪಡಿಸಿದರು.