ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೊಬೈಲ್, ಟಿ.ವಿ.ಯಿಂದ ದೂರವಿರಿ

Mainashree
Updated On : 27 Jan 2013, 12:12 pm

ಚಿಕ್ಕಮಗಳೂರು: ಪೋಷಕರು ಮಕ್ಕಳನ್ನು ಮೊಬೈಲ್, ಟಿ.ವಿ.ಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದ್ದಾರೆ.
   ನಗರದ ಜೆವಿಎಸ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆಯೇ ಹೊರತು ಅವರ ಬಗ್ಗೆ ಆಸಕ್ತಿ ತೆಗೆದುಕೊಳ್ಳುತ್ತಿಲ್ಲ. ಮಕ್ಕಳಿಗೆ ಒತ್ತಡ ಕಡಿಮೆ ಮಾಡಿ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಜೀವನದ ನಿಜವಾದ ಅರ್ಥ ಮತ್ತು ಜವಾಬ್ದಾರಿಗಳನ್ನು ವಯಸ್ಸಿಗೆ ತಕ್ಕಂತೆ ತಿಳಿಸಬೇಕು ಎಂದರು.
ವಿವೇಕಾನಂದರ ಆದರ್ಶ ಪಾಲಿಸಿ: ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿವೇಕಾನಂದರ ಆದರ್ಶಗಳನ್ನು ಇಂದಿನ ಯುವ ಜನತೆ ಪಾಲಿಸುವ ಅವಶ್ಯಕತೆ ಇದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಯುವ ಪೀಳಿಗೆಯ ಶ್ರಮ ಮತ್ತು ಜವಾಬ್ದಾರಿ ಅಗತ್ಯ ಎಂದು ಹೇಳಿದರು.
ಹೆಚ್ಚಿನ ಆಸಕ್ತಿ ಅಗತ್ಯ: ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ. ಮಹೇಶ್ ಗೌಡ ಮಾತನಾಡಿ, ಶಿಕ್ಷಕರ ಜೊತೆಗೆ ಪೋಷಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ತೆಗೆದುಕೊಂಡಾಗ ಆ ಮಕ್ಕಳು ದೇಶದ ಸತ್ಪ್ರಜೆಯಾಗುತ್ತಾರೆ. ಸಂಘದ ಯುವ ನಿರ್ದೇಶಕರುಗಳು ಶಾಲಾ ಅಭಿವೃದ್ಧಿಗೆ ಮತ್ತಷ್ಟು ಶ್ರಮವಹಿಸಿ ಆಧುನೀಕರಣ ಮಾಡಬೇಕು. ಈ ಕಾರ್ಯಕ್ಕೆ ನಮ್ಮ ಬೆಂಬಲ ಹಾಗೂ ಸಹಕಾರವು ಇರುತ್ತದೆ ಎಂದರು.
ಕಾರ್ಯದರ್ಶಿ ಬಿ.ಎಲ್. ಸಂದೀಪ್, ಉಪಾಧ್ಯಕ್ಷ ಕನಕ, ಮಹಿಳಾ ಸಂಘದ ಕಾರ್ಯದರ್ಶಿ ಆರತಿ ನಾರಾಯಣ್, ಶಾಲಾ ಕಾರ್ಯದರ್ಶಿ ಹಿಮಕೀರ್ತಿ, ನಿರ್ದೇಶಕರುಗಳಾದ ಚಂದ್ರಪ್ಪ, ಕೆ.ಎಸ್. ನಾರಾಯಣಗೌಡ, ಹೆಚ್.ಎಸ್. ಕವೀಶ್, ಹೆಚ್.ಆರ್. ಉತ್ತಮ್‌ಗೌಡ, ಎಂ.ಎಸ್. ಪ್ರದೀಪ್ ಕುಮಾರ್, ರವಿ, ಕೃಷ್ಣೇಗೌಡ, ಹರೀಶ್, ರಮೇಶ್, ಲಕ್ಷ್ಮೀಶ, ವ್ಯವಸ್ಥಾಪಕ ರಾಜು, ಕಾಲೇಜು ಪ್ರಾಂಶುಪಾಲೆ ಚಂದ್ರಕಲಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement