ವಿದ್ಯಾರ್ಥಿಗಳಿಗೆ ಪ್ರತಿ ಕ್ಷೇತ್ರದ ಅರಿವು ಅಗತ್ಯ
ತರೀಕೆರೆ: ಎಲ್ಲ ಕ್ಷೇತ್ರದ ಅರಿವು ಅಗತ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ನರೇಂದ್ರ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಹಯೋಗ ಯೋಜನೆಯ 120 ಗಂಟೆಗಳ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಹಯೋಗದ ತರಬೇತಿಯ ಉಪಯೋಗವನ್ನು ಪಡೆಯಬೇಕು ಎಂದರು. ಪ್ರಾಚಾರ್ಯ ಅಲಿಸ್ ಡಿಕಾಸ್ಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸಿದ್ದರಾಗಬೇಕು, ಆಧುನಿಕತೆಗೆ ಹೊಂದುವಂತಹ ಜ್ಞಾನವನ್ನು ಪಡೆಯಬೇಕು ಎಂದು ತಿಳಿಸಿದರು.
ಉಪನ್ಯಾಸಕ ಡಾ. ಜಗದೀಶ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಂ. ನರೇಂದ್ರರನ್ನು ಕಾಲೇಜು ವತಿಯಿಂದ ಸನ್ಮಾನಿಸಿದರು. ಸಹಯೋಗದ ಚಿಕ್ಕಮಗಳೂರಿನ ಯೋಗೀಶ್, ವಿಕಸನದ ಯಶವಂತ್, ಉಪನ್ಯಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು.