ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿವೇಕಾನಂದ ಉದ್ಯಾನ ಉದ್ಘಾಟನೆ

Lingaraj Badiger
Updated On : 28 Jan 2013, 11:19 am

ಚಿಕ್ಕಮಗಳೂರು: ಇಲ್ಲಿನ ಜಯನಗರ ಬಡಾವಣೆಯಲ್ಲಿ ಸಿಡಿಎ ನಿಂದ 6 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ವಿವೇಕಾನಂದ ಪಾರ್ಕನ್ನು ಸಿಡಿಎ ಅಧ್ಯಕ್ಷ ಬಿ. ರಾಜಪ್ಪ ಭಾನುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ರಾಜಪ್ಪ, ಬಡಾವಣೆ ಗೊಂದು ಪಾರ್ಕ್ ಇದ್ದರೆ ಪರಿಸರ ರಕ್ಷಣೆ ಜೊತೆ ಪ್ರಕೃತಿದತ್ತವಾದ ಉತ್ತಮ ಗಾಳಿ, ಬೆಳಕಿನಿಂದ ಮನುಷ್ಯನ ಆರೋಗ್ಯ ವೃದ್ಧಿಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಗರದಲ್ಲಿ ಕಾಣೆಯಾಗಿದ್ದ ಹಲವು ಪಾರ್ಕ್‌ಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ರು. 6 ಲಕ್ಷ ವೆಚ್ಚ: ಈ ಪಾರ್ಕ್‌ಗೆ 6 ಲಕ್ಷ ರು. ವ್ಯಯಿಸಿ ವಾಕ್‌ಪಾತ್, ವಿಶ್ರಾಂತಿ ಛೇರ್, ಧ್ವಜಸ್ತಂಬ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ. ಸಾರ್ವಜನಿಕರು ಈ ಉದ್ಯಾನವನವನ್ನು ಉಪಯೋಗಿಸಿಕೊಂಡು ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.
ಪಾರ್ಕ್ ಸಮಿತಿ ಅಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, ಹೊಸ ಬಡಾವಣೆಗಳು ಉದ್ಬವಿಸಿದ ಹಾಗೆ ನಗರ ಪ್ರದೇಶವು ಬೆಳೆಯುತ್ತಿದೆ ಇದರಿಂದ ಶಬ್ದ ಮತ್ತು ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಇಂತಹ ಒತ್ತಡಗಳಿಂದ ದೂರವಿರಲು ಉದ್ಯಾನವನ ಅವಶ್ಯವಾಗಿದೆ. ಈಗಾಗಲೇ ವಿಶಾಲವಾದ ಪಾರ್ಕ್ ಅಭಿವೃದ್ಧಿಗೆ ಸಿಡಿಎ ಸಹಕರಿಸಿದ್ದು ವಾಯುವಿಹಾರಕ್ಕಾಗಿ ಪಾತ್ ನಿರ್ಮಿಸಲಾಗಿದೆ.
ಇಲ್ಲಿರುವ ಗಿಡಗಳನ್ನು ಪೋಷಿಸಿ ಇದನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆ ನಿರ್ವಹಣೆಯ ಜವಾಬ್ದಾರಿಯು ಇಲ್ಲಿನ ನಾಗರಿಕರ ಮೇಲಿದೆ ಎಂದರು.
ಸಿಡಿಎ ಸದಸ್ಯ ಕೇಶವ, ಶಾರದಮ್ಮ, ಮಧು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸೀತಾರಾಂಭರಣ್ಯ, ಸಮಿತಿ ಗೌರವಾಧ್ಯಕ್ಷ ರುದ್ರಪ್ಪ, ವೀರೇಗೌಡ, ಅರುಣ್ಯ್ಶೆಟ್ಟಿ, ನಿಖಿಲ್, ಚಂದನ್, ಸುಪ್ರಿತ್, ಪುಟ್ಟಸ್ವಾಮಿಗೌಡ, ಮಂಜುನಾಥ್, ಬಸವರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement