ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಟಿ ವೈದ್ಯ ಪದ್ಧತಿ ಉಳಿಸಿ: ಗಜೇಂದ್ರ

Lingaraj Badiger
Updated On : 29 Jan 2013, 11:15 am

ಶೃಂಗೇರಿ: ಸಾವಿರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ನಾಟಿ ವೈದ್ಯ ಪದ್ಧತಿ ಅಳಿವಿನ ಅಂಚಿನಲ್ಲಿರುವ ಔಷಧಿ ಸಸ್ಯಗಳನ್ನು ಉಳಿಸಿ ಬೆಳಸಬೇಕೆಂದು ಪಶ್ಚಿಮಘಟ್ಟ ಕಾರ್ಯಪಡೆಯ ಗೊರಸುಕೊಡಿಗೆ ಗಜೇಂದ್ರ ತಿಳಿಸಿದರು.
ಪಟ್ಟಣದ ಹನುಮಂತನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮೀತಿ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ ಸಹಯೋಗದಲ್ಲಿ ನಡೆದ ನಾಟಿ ವೈದ್ಯರ ಸಮಾವೇಶ ಹಾಗೂ ಹಸಿರು ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ನಾಟಿ ವೈದ್ಯ ಪದ್ಧತಿ ಬಗ್ಗೆ ವೇದಗಳು, ಪುರಾಣಗಳಲ್ಲಿ ತಿಳಿಸಲಾಗಿದೆ. ಆದರೆ ಈ ಪದ್ಧತಿಯನ್ನು ಅನುಮಾನದಿಂದ ನೋಡಲಾಗುತ್ತಿದೆ. ನಾಟಿ ವೈದ್ಯರು ಕೀಳರಿಮೆ, ಅಗೌರವಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.
ಇತ್ತೀಚೆಗೆ ವಾಣಿಜ್ಯ ಔಷಧಿ ಕಂಪನಿಗಳ ಹಾವಳಿಯಿಂದ ಔಷಧ ಸಸ್ಯಗಳು ಅಳಿವಿನಂಚಿನಲ್ಲಿದೆ. ಅನೇಕ ಔಷಧ ಸಸ್ಯಗಳು ಕಣ್ಮರೆಯಾಗಿವೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಸಾಕಷ್ಟು ಔಷಧ ಸಸ್ಯಗಳಿತ್ತು. ಅಳಿವಿನಂಚಿನಲ್ಲಿರುವ ಅತ್ಯಮೂಲ್ಯ ಔಷಧ ಸಸ್ಯಗಳನ್ನು ಸಂರಕ್ಷಿಸಬೇಕಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಡೆಯಬೇಕಿದೆ. ಎಂದರು.
ಜಿಪಂ ಸದಸ್ಯ ಶಿವಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಪಂ ಅಧ್ಯಕ್ಷ ಟಿ.ಕೆ. ಪರಾಶರ, ವೈದ್ಯ ದಿನಕರ ಡೋಂಗ್ರೆ, ರವಿಕಾಂತ್ ಪಟವರ್ದನ್ ಇದ್ದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ನಾಟಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement