ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಿಳಾ ಸಬಲೀಕರಣದಿಂದ ಅಭಿವೃದ್ಧಿ

Lingaraj Badiger
Updated On : 29 Jan 2013, 11:04 am

ಚಿಕ್ಕಮಗಳೂರು: ಮಹಿಳೆ ಅಬಲೆ ಅಲ್ಲ ಸಬಲೆ. ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಹಾಯಕ ಕೃಷಿ ಅಧಿಕಾರಿ ಸುಜಾತಾ ಓಂಕಾರಸ್ವಾಮಿ ಹೇಳಿದ್ದಾರೆ.
ಅಕ್ಕಮಹಾದೇವಿ ಮಹಿಳಾ ಸಂಘದ ಜಯನಗರ ಬಡಾವಣೆ ಶರಣೆ ಸತ್ಯಕ್ಕ ತಂಡ ಭಾನುವಾರ ಸಂಜೆ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬನದಹುಣ್ಣಿಮೆ ಮಾಸಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ದೃಢ ನಿರ್ಧಾರ ಅಗತ್ಯ. ಯೋಚಿಸಿ, ಯೋಜಿಸಿ ತೀರ್ಮಾನ ಕೈಗೊಳ್ಳುವುದರಲ್ಲಿ ಕುಟುಂಬದ ಹಿತ ಇದೆ. ಆರೋಗ್ಯ ಪಾಲನೆಗೆ ಆದ್ಯತೆ ನೀಡಬೇಕು. ಪೌಷ್ಟಿಕಾಂಶ ಆಹಾರದ ಜೊತೆಗೆ ಯೋಗ, ಧ್ಯಾನ, ಆಯುರ್ವೇದದ ಬಗ್ಗೆ ಅರಿವು ಹೊಂದಿರುವುದು ಅಗತ್ಯ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸಂಘಟಿತವಾಗಿ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯದರ್ಶಿ ಹೇಮಾಲತಾ, ಸಹ ಕಾರ್ಯದರ್ಶಿ ಭಾರತಿ, ಮಮತಾ, ಖಜಾಂಚಿ ಯಮುನಾ ಸಿ.ಶೆಟ್ಟಿ ಉಪಸ್ಥಿತರಿದ್ದರು. ತಂಡದ ನಾಯಕಿ ಮಂಜುಳಾ ಸ್ವಾಗತಿಸಿ, ದಾಕ್ಷಾಯಣಿ ವಂದಿಸಿದರು. ಲಾವಣ್ಯ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement