ಶ್ರೇಯಾ, ಪ್ರಿಯಾಂಕಾಗೆ ಪ್ರಶಸ್ತಿ
ಕೊಪ್ಪ: ಬಾಲ ಕಲಾವಿದರಾದ ಶ್ರೇಯಾ ಮತ್ತು ಪ್ರಿಯಾಂಕ ಸಹೋದರಿಯರ ಸಂಗೀತ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯನ್ನು ಗುರುತಿಸಿ ಬೆಳಗಾವಿಯ ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ(ರಿ)ಮತ್ತು ಪತ್ರಕರ್ತಬಳಗ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇವರಿಗೆ ಸುವರ್ಣ ಕರ್ನಾಟಕ ಕನ್ನಡ ರತ್ನ ಪ್ರಶಸ್ತಿಯನ್ನು ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ ನೀಡಿ ಪುರಸ್ಕಾರಿಸಿದ್ದಾರೆ. ಪಟ್ಟಣ ಶಾರದ ವಿದ್ಯಾಮಂದಿರ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಸಾಧೆಯನ್ನು ಪ್ರಶಂಶಿಸಿದ್ದಾರೆ.