ರೈತರಿಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ
ನರಸಿಂಹರಾಜಪುರ: ಮಾರುಕಟ್ಟೆ ಏರಿಳಿತ, ಹವಾಮಾನ ವೈಪರೀತ್ಯ, ಕೂಲಿಯಾಳುಗಳ ಸಮಸ್ಯೆಯಿಂದಾಗಿ ರೈತರಿಗೆ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಜೆ.ಜಿ.ನಾಗರಾಜ್ ಸಲಹೆ ನೀಡಿದರು.
ಸಾವಯುವ ಕೃಷಿ: ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕೃಷಿ ಇಲಾಖೆ, ಮಹಿಳಾ ಮತ್ತು ಕಲ್ಯಾಣ ಇಲಾಖೆ, ತಾಲೂಕು ಕೃಷಿಕ ಸಮಾಜದ ಆಶ್ರಯದಲ್ಲಿ ನಡೆದ ಕೃಷಿ ಆಂದೋಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರಿನ ಮೂಲ: ವಸ್ತು ಪ್ರದರ್ಶನ ಉದ್ಘಾಟಿಸಿದ ಜಿಪಂ ಸದಸ್ಯೆ ಸುಜಾತ ಮಾತನಾಡಿ, ರೈತರೇ ದೇಶದ ಬೆನ್ನೆಲಬಾಗಿದ್ದಾರೆ. ರೈತರು ಹೆಚ್ಚಾಗಿ ಸಾವಯುವ ಕೃಷಿಯತ್ತ ತೊಡಗಬೇಕು ಎಂದರು. ಜಿಪಂ ಸದಸ್ಯ ಆದಿಲ್ ಮತ್ತೊಂದು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ,ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ಕೃಷಿಕರು ಕೃಷಿ ಇಲಾಖೆಯ ಮಾರ್ಗದರ್ಶನದಂತೆ ನಡೆದರೆ ಲಾಭ ಗಳಿಸಬಹುದು ಎಂದರು. ತಾಪಂ ಉಪಾಧ್ಯಕ್ಷೆ ಸುಮಿತ್ರ ಕೃಷಿ ಕೈಪಿಡಿ ಬಿಡುಗಡೆಗೊಳಿಸಿದರು. ತಾಪಂ ಸಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ತಾಪಂ ಸದಸ್ಯರಾದ ಎಸ್.ಎಸ್. ಶಾಂತಕುಮಾರ್, ಪ್ರೇಮ, ಬಿ.ಬಿ. ಉಮಾ, ಜಿ.ಡಿ. ಮಂಜಪ್ಪ, ಕೆ.ಎಸ್. ನಾಗೇಶ್, ಹೇಮಲತಾ, ಸುಂದರಿ,ಬಿ.ಎಚ್. ಸುಧಾ, ಕೆ.ಪಿ. ಸಂಪತ್ ಕುಮಾರ್, ಸುಬ್ಬಣ್ಣ, ಚಂದ್ರಶೇಖರ್, ತಹಸೀಲ್ದಾರ್ ಕೃಷ್ಣಮೂರ್ತಿ, ಜ್ಯೋತಿಲಕ್ಷ್ಮಿ, ವಿಜಯಕುಮಾರ್, ಸೀಮಾ, ಓಂಕಾರಪ್ಪ, ಡಾ. ವಿಜಯಕುಮಾರ್ ಇದ್ದರು.
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಬತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿ.ಡಿ. ಜಾರ್ಜ್, ದ್ವಿತೀಯ ಸ್ಥಾನ ಪಡೆದ ಎ.ಎಚ್. ರವಿ, ತೃತೀಯ ಸ್ಥಾನ ಪಡೆದ ಶಿವಪ್ಪ ಹಾಗೂ ಜಿಲ್ಲಾ ಮಟ್ಟದ ಬತ್ತದ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಎ.ಎಸ್. ಮಂಜುನಾಥ ಅವರನ್ನು ಅಭಿನಂದಿಸಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡುಗಳನ್ನು ವಿತರಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ಓಂಕಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೈತರೊಂದಿಗೆ ಸಂವಾದ: ಮಧ್ಯಾಹ್ನದ ನಂತರ ರೈತರೊಂದಿಗೆ ಕೃಷಿ ವಿಜ್ಞಾನಿಗಳು ಸಂವಾದ ಕಾರ್ಯಕ್ರಮ ನಡೆಸಿದರು. ಸಂವಾದದಲ್ಲಿ ನವಿಲೆ ಕೃಷಿ ಮಹಾ ವಿದ್ಯಾಲಯದ ಸಸ್ಯರೋಗ ತಜ್ಞ ಡಾ. ಗಂಗಾಧರ ನಾಯಕ್, ಶಿವಮೊಗ್ಗ ಪಶು ವಿದ್ಯಾಲಯದ ಬೇಸಾಯ ತಜ್ಞ ಡಾ. ವೆಂಕಟೇಶ್, ಸೀಗೋಡು ಕಾಫಿ ಸಂಶೋಧನಾ ಕೇಂದ್ರದ ಕೀಟ ಶಾಸ್ತ್ರ ತಜ್ಞ ಡಾ. ಸೀತರಾಮ್, ಮಣ್ಣು ವಿಜ್ಞಾನಿ ಡಾ. ಶಿವಪ್ರಸಾದ್, ತೋಟಗಾರಿಕೆ ಬೆಳೆ ತಜ್ಞ ಡಾ.ನಾಗೇಂದ್ರ ಪ್ರಸಾದ್ ಭಾಗವಹಿಸಿದ್ದರು.