ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೋಕಾಯುಕ್ತ ಬಲೆಗೆ ಅಧಿಕಾರಿ, ಗುಮಾಸ್ತ

Lingaraj Badiger
Updated On : 31 Jan 2013, 11:03 am

ತರೀಕೆರೆ: ಅಂಗಡಿಯ ಪರಿಷ್ಕೃತ ಅರ್ಹತಾ ಪತ್ರ ನೀಡಲು ಲಂಚ ಪಡೆಯುವ ವೇಳೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಹಾಗೂ ಗುಮಾಸ್ತರೋರ್ವರು ಲೋಕಾಯುಕ್ತರು ಬೀಸಿದ ಬಲೆಗೆ ಬುಧವಾರ ಬಿದ್ದಿದ್ದಾರೆ.
ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಪಾಲಾಕ್ಷಪ್ಪ, ಗುಮಾಸ್ತ ಗುರುಮೂರ್ತಿ ಅವರು ಬಲೆಗೆ ಬಿದ್ದಿದ್ದಾರೆ.
ಎನ್.ಆರ್. ಪುರದ ಜೋಸೆಫ್ ಅವರ ಅಂಗಡಿಯ ಪರಿಷ್ಕೃತ ಅರ್ಹತಾ ಪತ್ರ ನೀಡಲು ಪಾಲಾಕ್ಷಪ್ಪ ಹಾಗೂ ಗುರುಮೂರ್ತಿ ತಲಾ 5 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ಈ ಸಂಬಂಧ ಜೋಸೆಫ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನನ್ವಯ ಲೋಕಾಯುಕ್ತ ಡಿವೈಎಸ್ಪಿ ಪ್ರಸನ್ನ ವಿ. ರಾಜು ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಪಾಲಾಕ್ಷಪ್ಪ ಹಾಗೂ ಗುರುಮೂರ್ತಿ ಅವರು ಲಂಚ ಪಡೆಯುವ ವೇಳೆಯಲ್ಲಿ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಡಿಕ್ಕಿ: ಸವಾರ ಸಾವು
ಶೃಂಗೇರಿ: ಪಟ್ಟಣದ ತೆಕ್ಕೂರು ಸರ್ಕಲ್ ಬಳಿ ಬೈಕ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
 ಬೈಕ್ ಸವಾರ ಸ್ಥಳೀಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಕಿರಣ್‌ಕುಮಾರ್ (20) ಗಂಬೀರ ಗಾಯಗೊಂಡಿದ್ದು, ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಲ್ಲಿ ಆತ ಮೃತಪಟ್ಟಿರುತ್ತಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement