ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅನುದಾನ ಬಳಕೆಯಿಂದ ಅಭಿವೃದ್ಧಿ

Lingaraj Badiger
Updated On : 1 Feb 2013, 11:02 am

ತರೀಕೆರೆ: ಸರ್ಕಾರದ ವಿವಿಧ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲರ ಸಹಕಾರದಿಂದ ಪಟ್ಟಣದಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯ ನಿರ್ವಹಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎಂ. ನರೇಂದ್ರ ತಿಳಿಸಿದರು.  
 ಅವರು, ಗುರುವಾರ ಪುರಸಭಾ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ, ಪುರಸಭೆ ಐದು ವರ್ಷದ ಸಾಲಿನ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಕೃತಜ್ಞತೆ ಅರ್ಪಿಸಿ ಮಾತನಾಡಿದರು.
 ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ  ನಿರ್ವಹಿಸುವುದರಲ್ಲಿ ತರೀಕೆರೆ ಪುರಸಭೆ ಪ್ರಥಮ ಸ್ಥಾನದಲ್ಲಿದೆ. ಹೆಚ್ಚು ಅನುದಾನ ಕೂಡ ದೊರಕಿದೆ. ಮತ್ತೆ ಹೊಸದಾಗಿ ರು. 3 ಕೋಟಿಯನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಟೆಂಡರ್ ಕರೆಯಲಾಗಿದೆ. ರು. 7 ಲಕ್ಷದಲ್ಲಿ ಮುಕ್ತಿವಾಹನ ಖರೀದಿಸಲು ಸಿದ್ಧತೆ ಕೈಗೊಂಡಿದ್ದು ಸರ್ಕಾರ ಕೊಟೇಶನ್ ಮಂಜೂರಾತಿ ಮಾಡಬೇಕು ಎಂದು ಅವರು ಮನವಿ ಮಾಡಿದರು.
   ಸದಸ್ಯ ಟಿ.ಎಸ್.ಧರ್ಮರಾಜ್, ಟಿ.ಜಿ. ಅಶೋಕ್‌ಕುಮಾರ್, ಎಚ್.ಯು. ಫಾರೂಕ್, ಟಿ.ಜೆ. ಗೋಪಿಕುಮಾರ್, ಟಿ.ಆರ್. ಬಸವರಾಜ್, ಜಿಯಾ ಉಲ್ಲಾ, ಸುರೇಶ್, ಜಯ್ಯಮ್ಮ, ಪಾರ್ವತಮ್ಮ, ಹೇಮಲತ ರೇವಣ್ಣ, ಪುರಸಭೆ ಮುಖ್ಯಾಧಿಕಾರಿ ಕೆ.ಎಂ. ಸತ್ಯನಾರಾಯಣ್, ಶೇಷಪ್ಪ  ಮಾತನಾಡಿದರು.
 ಪುರಸಭೆ ಉಪಾಧ್ಯಕ್ಷೆ ಸೀತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್, ಸೋಮಶೇಖರ್, ಪುರಸಭೆ ಸದಸ್ಯರು, ವ್ಯವಸ್ಥಾಪಕ ನಾಗರಾಜ್, ಪುರಸಭೆ ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement