ಕಡೂರು ಕ್ಷೇತ್ರದಿಂದಲೇ ಸ್ಪಧೆ ಖಚಿತ: ವೈ.ಎಸ್.ವಿ. ದತ್ತಾ
ಕಡೂರು: ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದಲೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಥರ್ಧಿಸುವುದಾಗಿ ಜೆಡಿಎಸ್ ರಾಜ್ಯ ವಕ್ತಾರ ವೈ.ಎಸ್.ವಿ. ದತ್ತ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, 2005 ರಿಂದಲೂ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಪಕ್ಷವನ್ನು ಕಟ್ಟಿದ್ದು, ಶೃಂಗೇರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸುಳ್ಳು ಎಂದರು. ರೈತರು ಮತ್ತು ಜನಪರ ಹೋರಾಟ ಮಾಡುತ್ತಲೇ ಬಂದಿರುವ ತಾನು ಯಾರಿಂದಲೂ ಹೋರಾಟದ ಪಾಠವನ್ನು ಕಲಿಯಬೇಕಾಗಿಲ್ಲ ಎಂದರು. ಈ ಬಗ್ಗೆ ಪಕ್ಷದ ಕಾರ್ಯಕರ್ತರು ವದಂತಿಗಳಿಗೆ ಸೂಪ್ಪು ಹಾಕಬಾರದು ಎಂದು ಮನವಿ ಮಾಡಿದರು. 15 ರ ತನಕ ಜೆಡಿಎಸ್ ಅಭ್ಯರ್ಥಿಗಳಾಗುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆಯಲಾಗುತ್ತಿದೆ. ಒಂದು ಕ್ಷೇತ್ರದಿಂದ ಹೆಚ್ಚು ಅರ್ಜಿಗಳು ಬರುತ್ತಿರುವುದರಿಂದ ನಾಯಕರಾದ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ 10 ಜನರ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಎಂದರು.
ಜಿಲ್ಲೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಎಸ್.ಎಲ್. ಧರ್ಮೇಗೌಡ, ಶೃಂಗೇರಿ ಕ್ಷೇತ್ರಕ್ಕೆ ಎಚ್.ಟಿ. ರಾಜೇಂದ್ರ ಮತ್ತು ಕಡೂರು ಕ್ಷೇತ್ರಕ್ಕೆ ತಾವು ಅಭ್ಯರ್ಥಿ ಎಂದು ಈಗಾಗಾಲೇ ದೇವೇಗೌಡರು ಘೋಷಿಸಿದ್ದಾರೆ ಎಂದರು. ಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ,. ರಮೇಶ್, ಚನ್ನೇಗೌಡ ಇದ್ದರು.