ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕರಕುಶಲ ವಸ್ತು ತಯಾರಿಕೆಯ ಪುನರ್ಮನನ ಅಗತ್ಯ

Lingaraj Badiger
Updated On : 1 Feb 2013, 11:03 am

ಚಿಕ್ಕಮಗಳೂರು: ನಮ್ಮ ಸಾಂಪ್ರದಾಯಿಕ ಬದುಕಿನ ಜೀವನಾಡಿಯಾದ ಕರಕುಶಲ ವಸ್ತುಗಳ ತಯಾರಿಕೆಯನ್ನು ಮರೆಯುತ್ತಿದ್ದೇವೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ತರಬೇತಿ ಕಾರ್ಯಾಗಾರ: ಕೇಂದ್ರ ಸರ್ಕಾರದ ಜವಳಿ ಇಲಾಖೆಯ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಅಭಿವೃದ್ಧಿ ಕೇಂದ್ರ ನಗರದ ಬಸವನಹಳ್ಳಿ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ಕರಕುಶಲ ಕಲೆ ಅಭಿವೃದ್ಧಿ- ಅರಿವು ಮತ್ತು ಪ್ರಾತ್ಯಕ್ಷಿಕೆ ಕುರಿತಾದ ಎರಡು ದಿನ ತರಬೇತಿ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಫಲ: ಗ್ರಾಮೀಣ ಸೊಗಡಿನ ಬೊಂಬೆ ತಯಾರಿಕೆ ಮತ್ತು ಹಳ್ಳಿಗಾಡಿನ ನಮ್ಮಲ್ಲೆ ಸಿಗುವ ವಸ್ತುಗಳನ್ನು ಬಳಸಿ ಸುಂದರವಾದ ಆಟಿಕೆಗಳು, ಅಲಂಕಾರಿಕ ವಸ್ತುಗಳನ್ನು ಬದುಕಿನ ಕಲೆಯ ಭಾಗವಾಗಿ ಮಾಡಲಾಗುತಿತ್ತು.
   ಆದರೆ, ಪಾರಂಪರಿಕ ಕಲೆಯನ್ನು ದೂರಕ್ಕೆ ಸರಿಸುತ್ತಿದ್ದು ಕಲೆಯೆಂದರೆ ಕೇವಲ ಹಾಡು, ಚಿತ್ರ ಬರೆಸುವುದು, ನಾಟಕ ಎಂದು ಭಾವಿಸಿದ್ದೇವೆ, ನಮ್ಮ ಗ್ರಾಮೀಣ ಪ್ರತಿಭೆ ಮತ್ತು ಕಲೆಯನ್ನು ಉತ್ತೇಜಿಸುವಲ್ಲಿ ವಿಫಲರಾಗುತ್ತಿದ್ದೇವೆ.  
   ಗುಡಿ ಕೈಗಾರಿಕೆಯನ್ನು ಕರಕುಶಲ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅತ್ಯವಶ್ಯಕವೆಂದರು.
 ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಮಾತನಾಡಿ, ಸುಂದರವಾದ ಈ ರೀತಿಯ ಕರಕುಶಲ ವಸ್ತುಗಳು ಮನೆಯನ್ನು ಸುಂದರವಾಗಿಸುವುದನ್ನು ಕಲಿತು ನಮ್ಮ ಕೈನಲ್ಲಿ ತಯಾರಿಸಿದಲ್ಲಿ ಮನಸ್ಸಿಗೆ ಮುದ ನೀಡುವುದೆಂದರು.
   ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಕೆಲಸವನ್ನೇ ಅವಲಂಭಿಸದೆ ಸ್ವಂತ ಪರಿಶ್ರಮದಿಂದ ಸ್ವಾವಲಂಬಿಗಳಾಗುವತ್ತಾ ಗಮನಹರಿಸಿ ಇಂತಹ ಕರಕುಶಲ ಕಲೆಯನ್ನು ಕಲಿಯುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಎಂದರು.
 ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸರ್ಕಾರದ ಜವಳಿ ಇಲಾಖೆಯ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ಕೇಂದ್ರದ ಕ್ಷೇತ್ರಧಿಕಾರಿ ಬಿ.ಎನ್. ರಘುರಾಂ, ಕೇಂದ್ರ ಸರ್ಕಾರ ಕರಕುಶಲ ಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ದೇಶದ 32 ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದು ದಕ್ಷಿಣ ಭಾರತಕ್ಕೆ 18 ಶಾಲೆಗಳಿಗೆ ಕಾರ್ಯಕ್ರಮ ನೀಡಿದ್ದು, ಕರ್ನಾಟಕದಲ್ಲಿ ಎರಡು ಶಾಲೆಯನ್ನು ಮಾತ್ರ ನೀಡಿದೆ ಅದರಲ್ಲಿ ಬಸವನಹಳ್ಳಿ ಶಾಲೆ ಒಂದು.
   ಮಕ್ಕಳಿಗೆ ತರಬೇತಿಯನ್ನು ನೀಡಲು 12 ಜನರ ತಂಡ ಆಗಮಿಸಿದ್ದು ಎರಡು ದಿನ ತರಬೇತಿ ನೀಡಲಾಗುವುದು ಎಂದು ಹೇಳಿದರು.
 ಉಪ ಪ್ರಾಂಶುಪಾಲ ಸುಮಿತ್ರಮ್ಮ ಸ್ವಾಗತಿಸಿ, ಸತ್ಯನಾರಾಯಣ ವಂದಿಸಿ, ಶಿಕ್ಷಕಿ ಅನಿತಾ  ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement