ಕಾಂಗ್ರೆಸ್ ನಡಿಗೆ ಪೂರ್ವಭಾವಿ ಸಭೆ
ತರೀಕೆರೆ: ಕಾಂಗ್ರೆಸ್ ನಡಿಗೆ-ಸಾಮರಸ್ಯದ ಕಡೆಗೆ ಕಾಲ್ನಡಿಗೆ ಜಾಥಾವನ್ನು ಕರಾವಳಿ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿದ್ದು ಇದರ ಪೂರ್ವಬಾವಿ ಸಭೆಯನ್ನು ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿತ್ತು. ಉಲ್ಲಾಳದಿಂದ ಮಲ್ಪೆಯವರೆಗೆ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಲುಲ್ ಘನಿ ಅನ್ವರ್, ಕೆ.ಆರ್. ದ ೃವಕುಮಾರ್, ತರೀಕೆರೆ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ರವಿಶ್ಯಾನುಭೋಗ್, ಓಂಕಾರಪ್ಪ, ಜಿ.ಎಚ್. ಶ್ರೀನಿವಾಸ್, ಎಸ್. ತಿಪ್ಪೇರುದ್ರಯ್ಯ, ಟಿ.ಎಂ. ವೆಂಕಟೇಶ್, ಫಾರೂಕ್, ಗುಳ್ಳದಮನೆ ರಾಮಚಂದ್ರಪ್ಪ, ನಂದಕುಮಾರ್ ಭಾಗವಹಿಸಿದ್ದರು.
8ರಿಂದ ಸಂಪರ್ಕ ಕಾರ್ಯಕ್ರಮ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ 2012-13ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ ಎಂ.ಎ., ಎಂ.ಕಾಂ ಪದವಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗಾಗಿ ಸಂಪರ್ಕ ಕಾರ್ಯಕ್ರಮ ಫೆ. 8 ರಿಂದ 12ರವರೆಗೆ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿವೆ.
ದ್ವಿತೀಯ ಎಂ.ಎಸ್ಸಿ ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಫೆ. 22ರಿಂದ ಮಾರ್ಚ್ 7ರವರೆಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಂಪರ್ಕ ಕಾರ್ಯಕ್ರಮ, ಟೆಸ್ಟ್, ಸೆಮಿನರ್, ಪ್ರಾಯೋಗಿಕ ತರಗತಿಗಳು ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಪ್ರಾಯೋಗಿಕ ಪರೀಕ್ಷೆಗಳು ಮಾರ್ಚ್ 6 ಮತ್ತು 7 ರಂದು ನಡೆಯಲಿದೆ. ಸಂಪರ್ಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕಾಗಿ ಕೋರಲಾಗಿದೆ.
ನಾಳೆ ಪ್ರತಿಭಾ ಕಾರಂಜಿ
ಶೃಂಗೇರಿ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶನಿವಾರ ತಾಲೂಕಿನ ವಿದ್ಯಾರಣ್ಯಪುರ ಪಂಚಾಯಿತಿ ದುರ್ಗಾದೇವಸ್ಥಾನದಲ್ಲಿ ನಡೆಯಲಿದೆ.
ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜೀವರಾಜ್ ಅಧ್ಯಕ್ಷತೆ ವಹಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ತಾಪಂ ಅಧ್ಯಕ್ಷೆ ಶಾರದಾ ವಿಶ್ವನಾಥ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಅರಿಯುವುದು ಶಿಕ್ಷಕರ ಕರ್ತವ್ಯ
ನರಸಿಂಹರಾಜಪುರ: ಗ್ರಾಮಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇದ್ದರೆ ಪ್ರೌಢ ಶಾಲೆಯ ಶಿಕ್ಷಕರು ಗ್ರಾಮ ವಾಸ್ತವ್ಯ ಮಾಡುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆ ಅರಿಯುವ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕಾಂತರಾಜ್ ಸಲಹೆ ನೀಡಿದರು.
ಗುರು ಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷೆಯ ಫಲಿತಾಂಶ ಉತ್ತಮ ಪಡಿಸುವ ಬಗ್ಗೆ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ವಿಷಯವಾರು ಶಿಕ್ಷಕರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಕೇಂದ್ರದ ಅಧಿಕಾರಿ ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಮಂಜುನಾಥ್, ಡಿ. ರಾಜಪ್ಪ, ಕೆ. ಮೌನೇಶ್ವರಾಚಾರ್, ಕೆ.ಎನ್. ಲೋಕರಾಜ್, ಸುರೇಂದ್ರ ಇದ್ದರು. ತಾಲೂಕಿನ 21 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು, ವಿಷಯವಾರು ಶಿಕ್ಷಕರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು. Ú ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬಡ್ತಿ ಪಡೆದು ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಮಂಜುನಾಥ್ ಅವರನ್ನು ಬೀಳ್ಕೊಡಲಾಯಿತು.