ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಮನವಿ

Lingaraj Badiger
Updated On : 2 Jul 2013, 10:36 am

ಮೂಡಿಗೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಪಿಐ ವತಿಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡ ಲಕ್ಷ್ಮಣ್ ಕುಮಾರ್ ಮಾತನಾಡಿ, ಸರ್ಕಾರಿ ಭೂ ಒತ್ತುವರಿ ಬಗ್ಗೆ ಬಾಲಸುಬ್ರಮಣ್ಯಂ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಸರ್ಕಾರಿ ಭೂ ಒತ್ತುವರಿದಾರರಲ್ಲಿ ಜೀವನೋಪಾಯಕ್ಕೆ ಕೃಷಿ ಮಾಡಿದ 4ಎಕ್ರೆ 38 ಗುಂಟೆ ಮಿತಿಗೊಳಿಸಿ ಹಾಗೂ ಮನೆ ಗುಡಿಸಲು ನಿರ್ಮಿಸಿಕೊಂಡ  ಬಡವರಿಗೆ ಸಕ್ರಮಗೊಳಿಸಿ ಉಳಿದ ಎಲ್ಲಾ ಅಕ್ರಮ ಭೂ ಒತ್ತುವರಿಯನ್ನು ಕೂಡಲೇ  ತೆರೆವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ ಹಂಚಿಕೆ: ತೆರವುಗೊಳಿಸಿದ ಭೂಮಿಯನ್ನು ಭೂ ರಹಿತ ಕೃಷಿ ಕಾರ್ಮಿಕರಿಗೆ ಹಂಚಿಕೆ ಮಾಡಬೇಕು. ಎಂದು ಅವರು, ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ಸಂಬಂಧಿಸಿದ ಅಧಿಕಾರಿಗಳು ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಪಿಐ ಮುಖಂಡ ದೇವವೃಂದ ರವಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡವರಿಗೆ ವಸತಿ ನಿರ್ಮಾಣಕ್ಕೆ ನಿವೇಶನ ಹಂಚಲು ಪಂಚಾಯಿತಿ, ಪುರಸಭೆಗಳಂತಹ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಅಗತ್ಯ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕು. ಬರಗಾಲ ಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರು ಒದಗಿಸುವ ಹೊಸ ಯೋಜನೆಯನ್ನು ರೂಪಿಸಿ ಅರ್ಧಕ್ಕೆ ನಿಂತ ಯೋಜನೆ ಪೂರ್ಣಗೊಳಿಸುವಂತೆ ಅಗತ್ಯ ಹಣವನ್ನು ಆದ್ಯತೆ ಮೇರೆಗೆ ಮಂಜೂರು ಮಾಡಬೇಕು ಎಂದರು. ಸಿಪಿಐ ಕಾರ್ಯದರ್ಶಿ ಗೋಪಾಲ್ ಎನ್. ಶೆಟ್ಟಿ ಮಾತನಾಡಿದರು. ಕೆಳಗೂರು ರಮೇಶ್, ಲೋಕವಳ್ಳಿ ಮಂಜುನಾಥ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement