ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮತ ನೀಡಿದವರ ರಕ್ಷಣೆ ನಮ್ಮ ಕರ್ತವ್ಯ'

Lingaraj Badiger
Updated On : 2 Jul 2013, 10:40 am

ಕ.ಪ್ರ.ವಾರ್ತೆ, ಕೊಪ್ಪ, ಜು.1:
ಚುನಾವಣೆಯಲ್ಲಿ ನಮ್ಮನ್ನು ನಂಬಿ ಮತ ನೀಡಿದವರಿಗೆ ರಕ್ಷಣೆಗೆ ನಿಲ್ಲುವುದು ನಮ್ಮ ಕೆಲಸ ಹಾಗೂ ಕರ್ತವ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಸೋಮವಾರ ಇಲ್ಲಿನ ಪುರಭವನದಲ್ಲಿ ತಾಲೂಕಿನ ಮತದಾರಿಗೆ ತಾಲೂಕು ಬ್ಲಾಕ್ ಕಾಂಗ್ರೆಸ್‌ನಿಂದ ಕೃತಕಜ್ಞತಾ ಸರ್ಮಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಿಂದ ಶಿಸ್ತು ಬದ್ಧ ಸಂಘಟನೆ  ಮಾಡಿಕೊಂಡು ಬಂದರೂ ಕೆಲವೊಮ್ಮೆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ ಎಂದರು.
 ಚುನಾವಣೆಯಲ್ಲಿ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದಾರೆ ಎಂದ ಕೂಡಲೇ ಅವರು ಅನರ್ಹರು ಎಂದು ತಿಳಿಯಬಾರದು ಎಂದರು.
ನ್ಯಾಯಯುತ ಹೋರಾಟ: ಮಾಧ್ಯಮಗಳಲ್ಲಿ ಜಾಹೀರಾತು ನೀಡುವ ಮಾತ್ರಕ್ಕೆ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ. ಸದಾ ಅವರ ನಡುವೆ ನ್ಯಾಯಯುತ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟಾಗ ಮಾತ್ರ ಅವರ ವಿಶ್ವಾಸವನ್ನು ಗೆಲ್ಲಲು ಸಾಧ್ಯ ಎಂದವರು ಹೇಳಿದರು.
  ಆದ್ದರಿಂದ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಸೋತಿದೆ ಎಂದು ಕಾರ್ಯಕರ್ತರು ವಿಚಾಲಿತರಾಗದೇ ನಿಮ್ಮನ್ನು  ನಂಬಿ ಮತ ನೀಡಿದ 55 ಸಾವಿರ ಮತದಾರ ರಕ್ಷಣೆಗೆ ನಿಂತು ನ್ಯಾಯಯುತ ಚಳವಳಿ ಹಾಕೊಕಂಡು ಅವರಿಗೆ ನ್ಯಾಯ ದೊರಕಿಸುವತ್ತ ಶ್ರಮಿಸಿ ಎಂದರು.
  ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಭೂ ಒತ್ತುವರಿ ತೆರವು ಮಾಡುವುದಕ್ಕೆ ಅಂದಿನ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಮೂಲಕ ಕಾರಣ ಭೂ ಕಬಳಿಕೆಯ ಬಾಲಸುಬ್ರಮಣ್ಯ ಸಮಿತಿಯನ್ನು ಗ್ರಾಮೀಣ ಪ್ರದೇಶದವರಗೆ ವಿಸ್ತರಿಸಿದ್ದರಿಂದ ಈಗ ಈ ಭಾಗದ ಬಡ ರೈತರು ಬೀದಿ ಪಾಲಾಗುವುದಕ್ಕೆ ಕಾರಣರಾಗಿದ್ದರೆ ಎಂದರು.
ಈ ವಿಚಾರವಾಗಿ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ಇಲ್ಲಿಯ ಭೂ ಒತ್ತುವರಿಯ ತೆರವು ಮತ್ತು ಅಡಕೆ ಹಳದಿ ರೋಗದ ರೈತರ ಸಾಲಮನ್ನಾದ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ ಈ ಭಾಗದ ರೈತಪರವಾದ ಪ್ರಸ್ತಾವನೆಯನ್ನು ಮೊದಲ ಬಾರಿಗೆ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದರು.
ಶೃಂಗೇರಿ ಕ್ಷೇತ್ರದ ಕಾಂಗ್ರೇಸ್ ಪರಾಜಿತ ಅಭ್ಯರ್ಥಿ ಟಿ.ಡಿ.ರಾಜೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಅಭಿನಂದನಾ ಪತ್ರ ಮತ್ತು ಫಲ ಪುಷ್ಪನೀಡುವ ಮೂಲಕ ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ತಾಲೂಕು ಬ್ಲಾಕ್ ಘಟಕದ ಅಧ್ಯಕ್ಷ ಕೆ.ಜಿ. ಶೋಭಿಂತ್ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಲ್.ಎಂ. ಮೂರ್ತಿ, ಮುಖಂಡ ಎಚ್.ಜಿ. ವೆಂಕಟೇಶ್, ಎಚ್.ಎಂ. ನಟರಾಜ್, ಅಂಶುಮನ್, ಸಚಿನ್ ಮೀಗಾ, ಎಚ್.ಎಂ. ಸತೀಶ್, ಅಸಗೋಡು ನಾಗೇಶ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement