ವಿಜ್ಞಾನ ಕೇಂದ್ರ ಉದ್ಘಾಟನೆ
ತರೀಕೆರೆ: ಸರ್ವಶಿಕ್ಷಾ ಅಭಿಯಾನ ಯೋಜನೆ, ಅಗಸ್ತ್ಯ ಇಂಟರ್ ನ್ಯಾಶನಲ್ ಫೌಂಡೇಶನ್ ವತಿಯಿಂದ ಸೋಮವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಲಾಯಿತು. ಶಾಸಕ ಜಿ.ಎಚ್. ಶ್ರೀನಿವಾಸ್ ವಿಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ವಿಜ್ಞಾನ ಪ್ರಯೋಗಾಲಯ ಮಹತ್ವವಾಗಿದೆ. ಶಾಲಾ ಮಕ್ಕಳು ವಿಜ್ಞನ ಕೇಂದ್ರದ ಉಪಯೋಗ ಪಡೆಯಲಿ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ವರಪ್ಪ, ಸಿ.ಆರ್.ಪಿ. ತಿಮ್ಮಯ್ಯ, ಮಂಜುನಾಥ ಪ್ರಸಾದ್, ಜಗದೀಶ್ ಶಾಲಾ ಶಿಕ್ಷಕರು, ಮಕ್ಕಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಉತ್ತಮ ಮಳೆಗೆ ಜೈನರ ಪ್ರಾರ್ಥನೆ
ಬೀರೂರು: ಸತತ 3 ವರ್ಷಗಳಿಂದ ಬರಗಾಲದ ಸುಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಿರುವ ಈ ಭಾಗಕ್ಕೆ ಉತ್ತಮ ಮಳೆ ಕರುಣಿಸುವಂತೆ ಕೋರಿ ಬೀರೂರು ಪಟ್ಟಣದ ಜೈನ ಧರ್ಮೀಯರು ಇಲ್ಲಿನ ಜೈನ ತೀರ್ಥಂಕರ ವಿಮಲನಾಥಸ್ವಾಮಿ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪೂರಕ ಜಲಾಭಿಷೇಕ, ವಿಶೇಷಪೂಜೆ ಮತ್ತು ಅಂಲಕಾರಗಳನ್ನು ಶ್ರೀ ಆಚಾರ್ಯ ಧರ್ಮಧುರಂದರ ಸ್ವಾಮಿಯವರ ಮಾರ್ಗದರ್ಶನದಂತೆ ಸ್ತೋತ್ರಪಠಣ ಮಾಡುವ ಮೂಲಕ ಪ್ರಾರ್ಥಿಸಿದರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೆ ಜೈನ ಮಾತೆಯರು, ಮಕ್ಕಳು ಹಾಗೂ ಸಮಾಜದ ಹಿರಿಯರು, ಗಣ್ಯರು ಪಾಲ್ಗೊಂಡು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಶೃಂಗೇರಿಯಲ್ಲಿ ಸಾಧಾರಣ ಮಳೆ
ಶೃಂಗೇರಿ: ತಾಲೂಕಿನಾದ್ಯಂತ ಕಳೆದೆರೆಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ.
ಕೆಲ ದಿನಗಳ ಹಿಂದೆ ಸತತ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿತ್ತು. ಸೋಮವಾರ ಬೆಳಿಗ್ಗೆಯಿಂದ ಬಿಸಿಲು ಮಳೆಯ ವಾತಾವರಣವಿತ್ತು. ಸಂಜೆಯ ವೇಳೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಿತು.ನಿರಂತರ ಮಳೆಯಿಂದ ಕೆರೆ, ಕಾಲುವೆ, ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೆರೆ, ಕಾಲುವೆ, ಹಳ್ಳಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷಿ ಗೆ ಅಗತ್ಯ ನೀರಿನ ಸಂಗ್ರಹವಾಗಿರುವುದರಿಂದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗತೊಡಗಿದೆ.