ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ಮಾರ್ಟ್ ಕಾರ್ಡ್ ವಿತರಣೆಗೆ ಆಗ್ರಹ

Lingaraj Badiger
Updated On : 3 Jul 2013, 11:07 am

ಕ.ಪ್ರ.ವಾರ್ತೆ, ಮೂಡಿಗೆರೆ,  ಜು.2
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಹನದ ಮಾಲೀಕತ್ವ, ವಗಾವಣೆ, ಹೊಸ ವಾಹನಗಳ ನೋಂದಣಿ ಹಾಗೂ ಚಾಲನಾ ಪರವಾನಗಿ ಪತ್ರಗಳಿಗೆ ನೀಡುವ ಸ್ಮಾರ್ಟ್ ಕಾರ್ಡ್‌ಗಳನ್ನು ಕಳೆದ 10 ದಿನದಿಂದ ವಿತರಿಸದಿರುವುದರಿಂದ ಪರದಾಡುವಂತಾಗಿದೆ ಎಂದು ವಾಹನ ಮಾಲೀಕರು ಹಾಗೂ ಚಾಲಕರು ಆರೋಪಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿ, ವಾಹನ ದಾಖಲಾತಿ ಬದಲಾವಣೆ ಹಾಗೂ ನೋಂದಣಿಗೆ ನೀಡಿದ ದಾಖಲೆಗಳು ಇಲ್ಲದೆ ಇದ್ದರೆ ರಸ್ತೆಯಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ಇಲಾಖೆಯದ್ದೇ ತಪ್ಪಿಗೆ ವಾಹನ ಚಾಲಕರು ದಂಡ ತೆರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದಾಖಲಾತಿ ಬಗ್ಗೆ ಕಚೇರಿಯಲ್ಲಿ ವಿಚಾರಿಸಿದಾಗ ಸ್ಮಾರ್ಟ್ ಕಾರ್ಡ್‌ಗೆ ಅಗತ್ಯವಾದ ಕರೆನ್ಸಿ ಬೆಂಗಳೂರಿನ ಸಾರಿಗೆ ಆಯುಕ್ತರ ಕಚೇರಿಯಿಂದ ಸರಬರಾಜಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ನೆಪ ಹೇಳಿ
ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಕೂಡಲೇ ಸಮಸ್ಯೆ ಪರಿಹರಿಸಿ, ಸ್ಮಾರ್ಟ್ ಕಾರ್ಡ್ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement