ಹೊಲಿಗೆ ಯಂತ್ರ ವಿತರಣೆ
ಕ.ಪ್ರ.ವಾರ್ತೆ, ಕೊಪ್ಪ, ಜು.2
ತಾಲೂಕು ಕೈಗಾರಿಕೆ ಇಲಾಖೆಯ 2012-13ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿ ಯೋಜನೆಯಡಿ ಹೊಲಿಗೆ ತರಬೇತಿ ಪಡೆದ 15 ಮಂದಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಸುಧಾರಿತ ಉಪಕರಣಗಳನ್ನು ಶಾಸಕ ಡಿ.ಎನ್. ಜೀವರಾಜ್ ವಿತರಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ವಿತರಣೆ ಮಾಡಿದ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ್, ಜಿಪಂ ಸದಸ್ಯ ಅನ್ನಪೂರ್ಣ, ಸುಚಿತ್ರಾ ಹಾಗೂ ಚಂದ್ರಶೇಖರ್ ಇದ್ದರು.