ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆರಿದ್ರ ಮಳೆ ಆರ್ಭಟಕ್ಕೆ ಮಲೆನಾಡ ಜನ ಜೀವನ ಅಸ್ತವ್ಯಸ್ತ

Mainashree
Updated On : 4 Jul 2013, 11:28 am

ನರಸಿಂಹರಾಜಪುರ: ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಭಾರಿ ಮಳೆ ಸುರಿದಿದ್ದು ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
 ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಶಾಲೆಗಳಿಗೆ ಮಕ್ಕಳು ಬಂದ ನಂತರ ಎಸ್‌ಡಿಎಂಸಿ ತೀರ್ಮಾನದಂತೆ ಮಧ್ಯಾಹ್ನದ ಬಿಸಿಯೂಟದ ನಂತರ ರಜೆ ಘೋಷಿಸಲಾಯಿತು. ಮಳೆ ಹೀಗೆ ಮುಂದುವರಿದರೆ ಗುರುವಾರವೂ ಶಾಲೆಗೆ ರಜೆ ಘೋಷಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ. ನರಸಿಂಹರಾಜಪುರ: ತಾಲೂಕಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಭಾರಿ ಮಳೆ ಸುರಿದಿದ್ದು ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
 ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲವು ಶಾಲೆಗಳಿಗೆ ಮಕ್ಕಳು ಬಂದ ನಂತರ ಎಸ್‌ಡಿಎಂಸಿ ತೀರ್ಮಾನದಂತೆ ಮಧ್ಯಾಹ್ನದ ಬಿಸಿಯೂಟದ ನಂತರ ರಜೆ ಘೋಷಿಸಲಾಯಿತು. ಮಳೆ ಹೀಗೆ ಮುಂದುವರಿದರೆ ಗುರುವಾರವೂ ಶಾಲೆಗೆ ರಜೆ ಘೋಷಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಹರಿಯುವ ತುಂಗಾ ನದಿ, ಭದ್ರಾ ನದಿ ಹಾಗೂ ಇತರೆ ಹಳ್ಳಗಳು ಉಕ್ಕೇರಿ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಸಂಚಾರಕ್ಕೆ ಅಡಚಣೆ: ಕುದುರೆಗುಂಡಿಯಿಂದ ಕಾನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಹಳ್ಳ ಉಕ್ಕೇರಿ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಯ ಕೆಲವು ಭಾಗದಲ್ಲಿ 5 ಅಡಿಗೂ ಹೆಚ್ಚು ನೀರು ನಿಂತಿದೆ. ರಸ್ತೆಯ ಪಕ್ಕದ ಅಡಕೆ ತೋಟ, ಗದ್ದೆಗಳು ನೀರಿನಿಂದ ಜಲಾವೃತವಾಗಿವೆ. ಕಾನೂರು, ಕಟ್ಟಿನಮನೆಗೆ ಹೋಗುವ ಬಸ್ಸು, ಇತರೆ ವಾಹನಗಳು ಗುಡ್ಡೇಹಳ್ಳ, ಹೊಳೆಕೊಪ್ಪ, ಬಾಳೆಹಿತ್ತಲು ಮಾರ್ಗವಾಗಿ ಸಂಚರಿಸುತ್ತಿದೆ.
 ಮುತ್ತಿನಕೊಪ್ಪ ಭಾಗದಲ್ಲೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ತುಂಗಾ ನದಿ ಉಕ್ಕೇರಿ ನೂರಾರು ಎಕರೆ ಗದ್ದೆಗಳ ಮೇಲೆ ನೀರು ನಿಂತಿದೆ. ಸಸಿ ಮುಡಿಗಳು ನೀರಿನಲ್ಲಿ ಮುಳುಗಿದೆ. ಮುತ್ತಿನಕೊಪ್ಪ- ಮುಡಬ ಸಂಪರ್ಕ ಕಲ್ಪಿಸುವ ಶಂಕರಪುರ ಸೇತುವೆ ಮೇಲೆ ನೀರು ಹರಿಯುತ್ತಿದ್ದು ಬಸ್ಸು, ಇತರೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಮುಡಬ ಭಾಗದಿಂದ ಮುತ್ತಿನಕೊಪ್ಪಕ್ಕೆ ಬರುವ ಶಾಲಾ ಮಕ್ಕಳು, ಕೃಷಿಕರಿಗೆ  ಅಡಚಣೆ ಉಂಟಾಗಿದೆ.
ಕಾಲು ಸೇತುವೆ ಕುಸಿಯುವ ಭೀತಿ: ಶೆಟ್ಟಿಕೊಪ್ಪ-ಭದ್ರಾ ಕಾಲೋನಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆಯು ಬಾರೀ ಮಳೆಯಿಂದಾಗಿ ಕುಸಿಯುವ ಹಂತ ತಲುಪಿದೆ. ಶೆಟ್ಟಿಕೊಪ್ಪ ಸಮೀಪದ ಬಣಗಿ ಹಳ್ಳವು ಉಕ್ಕೇರಿ ಬಂದು ಪಕ್ಕದ ಜಮೀನಿನ ಮೇಲೆ ಹರಿಯುತ್ತಿದೆ. 20 ವರ್ಷದ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳ ಹರಿಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಾತೂರು ಸೇತುವೆ ಪಕ್ಕದ ರಸ್ತೆಯ ಮೇಲೆ ಬುಧವಾರ ಮಧ್ಯಾಹ್ನದ ನಂತರ ಹಳ್ಳ ಉಕ್ಕೇರಿ ಬಂದು ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ.
ಎಲ್ಲೆಲ್ಲೂ ನೀರು: ಬುಧವಾರದ ಬಿರುಸು ಮಳೆಯಿಂದಾಗಿ ಗದ್ದೆಗಳೆಲ್ಲಾ ಜಲಾವೃತವಾಗಿದೆ. ಇತ್ತೀಚೆಗೆ ಸಸಿ ಮುಡಿ ತಯಾರಿಸಿದ್ದು ಸಸಿ ಮುಡಿಗಳು ನೀರಿನಲ್ಲಿ ಮುಳುಗಿದೆ. ಗದ್ದೆಗಳ ಮೇಲೆ ಹಳ್ಳದಂತೆ ನೀರು ಹರಿಯುತ್ತಿರುವುದರಿಂದ ಗದ್ದೆಗೆ ಹಾಕಿರುವ ಹಟ್ಟಿ ಗೊಬ್ಬರ ಹಳ್ಳ ಸೇರುವ ಭೀತಿ ಎದುರಾಗಿದೆ. ಬಿರುಸು ಮಳೆಯಿಂದಾಗಿ ಅಡಕೆ ತೋಟಗಳಿಗೂ ಹಾನಿ ಸಂಭವಿಸಿದ್ದು ಎಳೆ ಅಡಕೆ ಕಾಯಿಗಳು ಉದುರುತ್ತಿದೆ. ಕೊಳೆ ಬಾರದಂತೆ ಬೋರ್ಡೋ ಸಿಂಪರಣೆ ಮಾಡಲು ತೊಂದರೆಯಾಗುತ್ತಿದೆ.
ಮೂಡಗೆರೆಯಲ್ಲೂ
ಮೂಡಿಗೆರೆ: ಕಳೆದ ಮೂರುದಿನಗಳಿಂದ ತಾಲೂಕಿನಾದ್ಯಂತ ಆರಿದ್ರಾ ಮಳೆ ಎಡೆಬಿಡದೇ ಸುರಿಯುತ್ತಿದ್ದು ಹೇಮಾವತಿ, ಸುಂಡೇಕೆರೆ ಹಳ್ಳ, ಭದ್ರಾ ನದಿಗಳು ತುಂಬಿ ಹರಿಯುತ್ತಿದ್ದು, ಗದ್ದೆಗಳು ಜಲಾವೃತ ಗೊಂಡು ರೈತರು ಆತಂಕಗೊಂಡಿದ್ದಾರೆ.
 ಕಳೆದ ರಾತ್ರಿಯಿಂದ ಬಿಡದೇ ಸುರಿಯುತ್ತಿರುವ ಮಳೆಗೆ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕಳಸ-ಹೊರನಾಡು ರಸ್ತೆಯ ಮೇಲೆ ಭದ್ರಾ ನದಿ ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತ ಗೊಂಡಿದೆ. ತಾಲೂಕಿನ ಉಗ್ಗೆಹಳ್ಳಿ ಕಾಲೋನಿಯ ಸಮೀಪ ಹೇಮಾವತಿ ನದಿ ಉಕ್ಕುತ್ತಿದ್ದು. ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಮಳೆ ಮುಂದುವರೆದಲ್ಲಿ ಗ್ರಾಮದ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆಗಳೆ ಹೆಚ್ಚಾಗಿದೆ.
 ಉಗ್ಗೆಹಳ್ಳಿ ಕಾಲೋನಿಯಲ್ಲಿ ಗುಡಿಸಲುಗಳದ್ದೆ ಕಾರು ಬಾರಾಗಿದ್ದು. ಇಲ್ಲಿಯ ಜನರ ಸಮಸ್ಯೆ  ಹಲವಾರು ವರ್ಷಗಳಿಂದಲೂ ಮಳೆಗಾಲದಲ್ಲಿ ಜೀವವನ್ನು ಕೈಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಶಾಸಕರಾಗಿದ್ದಾಗ ಉಗ್ಗೆಹಳ್ಳಿ ಕಾಲೋನಿ ಜನರಿಗೆ ಬೆಟ್ಟದ ಮನೆ ಸಮೀಪದಲ್ಲಿ ವಸತಿಗೃಹಗಳನ್ನು ನಿರ್ಮಿಸಿ ಕೊಟ್ಟಿದ್ದರು. ಆದರೇ ಆ ವಸತಿ ಗೃಹಕ್ಕೆ ಹೋಗಲು ಕಾಲೋನಿ ಜನರು ವಿರೋಧ ವ್ಯಕ್ತ ಪಡಿಸಿದ್ದರು. ವಸತಿ ಗೃಹಗಳು ಕೋಳಿ ಗೂಡಿನಂತಿದ್ದಿದ್ದು ತಲಾತಲಾಂತರದಿಂದ ವಾಸಿಸುತ್ತಿರುವ ಮನೆಯನ್ನು ಬಿಟ್ಟು ಹೋಗುವುದಕ್ಕೆ ಒಪ್ಪಲಿಲ್ಲ, ಬದಲಿಗೆ ಹೇಮಾವತಿ ನೀರು ಮನೆ ಅಂಗಳಕ್ಕೆ ಬಾರದ ರೀತಿಯಲ್ಲಿ ತಡೆ ಗೋಡೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿದ್ದರು.
 ನಂತರ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಹಿಂದಿನ ಡಿಸಿಎಂ ಈಶ್ವರಪ್ಪ ಉಗ್ಗೆಹಳ್ಳಿ ಕಾಲೋನಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ತಿಳಿಸಿ ಹೋದವರು ಈವರೆಗೂ ಕ್ರಮ ಕೈಗೊಂಡಿಲ್ಲ.
 ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ಥಗೊಂಡಿವೆ. ಕೆರೆ ಕಟ್ಟೆಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಉಗ್ಗೆಹಳ್ಳಿ ಗ್ರಾಪಂಗೆ ಸೇರಿದ ತತ್ಕೊಳ ನಿರಾಶ್ರಿತರು ವಾಸಿಸುತ್ತಿರುವ ಪ್ಯಾಟೆ ಹಿತ್ಲನಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು. ಜನರಿಗೆ ತಮ್ಮನ್ನು ರಕ್ಷಿಸಿ ಕೊಳ್ಳಲು ಪಟ್ಟಣಕ್ಕೆ ಬರಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಬಿಡದೆ ಸುರಿಯುತ್ತಿರುವ ಆರಿದ್ರಾ ಮಳೆ ಚಾರ್ಮಾಡಿ ಘಾಟ್‌ನಲ್ಲಿ ಜಲಾಪಾತಗಳು ಸೃಷ್ಟಿಯಾಗಿ ದಾರಿ ಹೋಕರನ್ನು ತಮ್ಮಡೆ ಸೆಳೆಯುತ್ತಿದೆ.
ತರೀಕೆರೆಯಲ್ಲಿ...
ತರೀಕೆರೆ: ಕಳೆದೆರಡು ದಿವಗಳಿಂದ ಸ್ವಲ್ಪ ಬಿಡುವ ನೀಡಿದ್ದ ಮಳೆ ಮಂಗಳವಾರ ರಾತ್ರಿಯಿಂದಲೇ ಎಡಬಿಡದೆ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.
ಪಟ್ಟಣದ ಬಸ್ ನಿಲ್ದಾಣ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯಿತು. ತಾಲೂಕಿನ ತ್ಯಾಗದಬಾಗಿ ಮತ್ತು ರಂಗೇನಹಳ್ಳಿಯಲ್ಲಿ 54 ಮಿ.ಮೀ., ತರೀಕೆರೆಯಲ್ಲಿ 48, ಲಕ್ಕವಳ್ಳಿಯಲ್ಲಿ 33.5, ಲಿಂಗದಹಳ್ಳಿಯಲ್ಲಿ 30.4, ಉಡೇವದಲ್ಲಿ 23, ಅಜ್ಜಂಪುರದಲ್ಲಿ 23.8. ಮತ್ತು ಶಿವನಿಯಲ್ಲಿ 12 ಮಿಮೀ, ಪ್ರಮಾಣದ ಮಳೆಯಾಗಿದೆ.
ಬಾಳೆಹೊನ್ನೂರು
ಬಾಳೆಹೊನ್ನೂರು: ಹೋಬಳಿಯಾದ್ಯಂತ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.
ನಿರಂತರ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭತ್ತದ ಕೃಷಿಕರಿಗೆ ಮಳೆ ಸಂತಸವನ್ನುಂಟು ಮಾಡಿದೆ. ಆದರೆ, ಅಡಿಕೆ ತೋಟಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆಗೆ ಅಡಚಣೆ ಉಂಟಾಗಿದೆ. ಮಂಗಳವಾರ ರಾತ್ರಿಯಿಂದ ನಿರಂತರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಪಟ್ಟಣದ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೇ ಮಳೆ ಮುಂದುವರೆದಲ್ಲಿ ಭದ್ರಾನದಿಯ ಅಸುಪಾಸಿನಲ್ಲಿರುವ ತೋಟ, ಗದ್ದೆ ಸೇರಿದಂತೆ ಕೃಷಿ ಜಮೀನುಗಳು ಜಲಾವೃತವಾಗುವ ಆತಂಕ ಎದುರಾಗಿದೆ.
ಭದ್ರಾನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಕಳಸ-ಹೊರನಾಡು ಹಾಗೂ ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆಯಿದೆ. ಅದಲ್ಲದೇ ನರಸಿಂಹರಾಜಪುರ ಹಾಗೂ ರಂಭಾಪುರಿ ಪೀಠಕ್ಕೆ ಸಂಪರ್ಕ ಕಲ್ಪಿಸುವ ಡೋಬಿಹಳ್ಳವೂ ತುಂಬಿ ಹರಿಯುತ್ತಿದೆ. ಬುಧವಾರ ಸುರಿದ ಬಾರೀ ಮಳೆ ಗಾಳಿಗೆ ಇಟ್ಟಿಗೆ ಸೀಗೋಡು ಸಮೀಪದ ಅರವಿಂದ ಡೈರಿ ಬಳಿ ಮರವೊಂದು ರಸ್ತೆಗೆ ಅಡ್ಡಗಿ ಬಿದ್ದು ಕೆಲಕಾಲ ಸಂಚಾರ ಸ್ತಬ್ಧಗೊಂಡಿತ್ತು. ನಂತರ ಕೂಡಲೇ ಅದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮಳೆ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಶಾಲಾ ಕಾಲೇಜುಗಳಿಗೆ ಬುಧವಾರ ಮಧ್ಯಾಹ್ನದ ನಂತರ ರಜೆ ಘೋಷಿಸಲಾಗಿತ್ತು.
ತಾಲೂಕಿನಲ್ಲಿ ಹರಿಯುವ ತುಂಗಾ ನದಿ, ಭದ್ರಾ ನದಿ ಹಾಗೂ ಇತರೆ ಹಳ್ಳಗಳು ಉಕ್ಕೇರಿ ಬಂದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement