ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೋದಾಮಿಗೆ ಬೆಂಕಿ: 3 ವರ್ಷ ಜೈಲು

Mainashree
Updated On : 4 Jul 2013, 11:28 am

ಚಿಕ್ಕಮಗಳೂರು: ಜಮೀನಿನ ವಿಚಾರದಲ್ಲಿ ದ್ವೇಷವನ್ನಿಟ್ಟುಕೊಂಡು ಗೋದಾಮಿಗೆ ಬೆಂಕಿ ಇಟ್ಟು ನಷ್ಟ ಉಂಟುಮಾಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷ ಶಿಕ್ಷೆ ಹಾಗೂ 1.25 ಲಕ್ಷ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
2012 ಆಗಸ್ಟ್ 12 ರಂದು ಚೌಳಹಿರಿಯೂರಿನಲ್ಲಿರುವ ದೇವರಾಜ್ ಹಾಗೂ ಚಂದ್ರಪ್ಪ ಎಂಬುವವರಿಗೆ ಸೇರಿದ  ಗೋದಾಮುಗಳಿಗೆ ಜಮೀನಿನ ವಿಚಾರದಲ್ಲಿ ದ್ವೇಷದ ಹಿನ್ನೆಲೆಯಲ್ಲಿ ಆರೋಪಿ ಬೊಮ್ಮಣ್ಣ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದ ಇದರಿಂದ ಸುಮಾರು 6.25 ಲಕ್ಷ ನಷ್ಟ ಉಂಟಾಗಿತ್ತು. ಈ ಸಂಬಂಧ ಯಗಟಿ ಪೊಲೀಸರು ಮೊಕದ್ದಮೆ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಎ. ಪಾಟೀಲ್ ಅವರು ಪ್ರಕರಣ ಸಾಬೀತಾದ ಹಿನ್ನೆಲೆ ಆರೋಪಿ ಬೊಮ್ಮಣ್ಣನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1.25 ಲಕ್ಷ ದಂಡ ವಿಧಿಸಿರುತ್ತಾರೆ. ದಂಡದ ಮೊತ್ತದಲ್ಲಿ ದೇವರಾಜ್ ಅವರಿಗೆ 75 ಸಾವಿರ ಹಾಗೂ ಹೆಚ್.ಬಿ. ಚಂದ್ರಪ್ಪ ಅವರಿಗೆ 40 ಸಾವಿರ ಪರಿಹಾರವಾಗಿ ನೀಡುವಂತೆ ಬುಧವಾರ ತೀರ್ಪು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement