ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಯೋವುಟ್ರಿಕ್ ತೂಕದ ಯಂತ್ರದಲ್ಲಿ ಪಡಿತರ ವಿತರಣೆಗೆ ಸೂಚನೆ

Mainashree
Updated On : 4 Jul 2013, 11:27 am

ಕ.ಪ್ರ.ವಾರ್ತೆ  ಮೂಡಿಗೆರೆ   ಜು.3
ತಾಲೂಕಿನ ಎಲ್ಲ ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿನಿಂದ ಬಯೋವುಟ್ರಿಕ್ ತೂಕದ ಯಂತ್ರದಲ್ಲಿ ಕಡ್ಡಾಯವಾಗಿ ಪಡಿತರಗಳನ್ನು ವಿತರಿಸದಿದ್ದರೆ ಸರಕಾರ ಸರಬರಾಜನ್ನು ಸ್ಥಗಿತಗೊಳಿಸಲಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ರತ್ನಾಕರ್ ನಾಯಕ್ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಸಭಾಂಗಣದಲ್ಲಿ ನಡೆದ ಪಡಿತರ ವಿತರಕರ ಸಭೆಯಲ್ಲಿ ಮಾತನಾಡಿ, ಮುಂದಿನ ತಿಂಗಳಿನಿಂದ ಹಿಂದಿನ ಪದ್ಧತಿಯಂತೆ ರಸೀದಿ ನೀಡಿ ತಕ್ಕಡಿಯಲ್ಲಿ ತೂಗಿ ಪಡಿತರ ವಿತರಿಸುವಂತಿಲ್ಲ. ಬಯೋವುಟ್ರಿಕ್ ತೂಕದ ಯಂತ್ರದಲ್ಲಿ ತೊಂದರೆ ಕಾಣಿಸಿಕೊಂಡರೆ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ದೂರು ನೀಡಿ ಸರಿಪಡಿಸಿದ ಬಳಿಕ ನಿಯಮಗಳಂತೆ ವಿತರಿಸಬೇಕು ಎಂದು ನಿರ್ದೇಶನ ನೀಡಿದರು. ಇದೀಗ ನಡೆಯುತ್ತಿರುವ ಬಯೋವುಟ್ರಿಕ್ ನವೀಕರಣ ವ್ಯವಸ್ಥೆಯನ್ನು ಜುಲೈನೊಳಗೆ ಮುಕ್ತಾಯಗೊಳಿಸಬೇಕು. ಸಂಬಂಧಿಸಿದವರು ಕಾರ್ಡ್‌ದಾರರಿಗೆ ಅಗತ್ಯ ಮುನ್ನೆಚ್ಚರಿಕೆ ನೀಡಬೇಕು. ನವೀಕರಣ ಮಾಡಿಸಿಕೊಳ್ಳದ ಕಾರ್ಡ್‌ಗಳು ರದ್ದಾಗಲಿವೆ ಎಂದು ತಿಳಿಸಬೇಕು ಹೇಳಿದರು.
10ರಿಂದ ಪ್ರಾರಂಭ: ಈ ತಿಂಗಳ 10ರಿಂದ 30 ಕೆ.ಜಿ. ಅಕ್ಕಿಯನ್ನು ಬಿಪಿಎಲ್ ಪಡಿತರ ವಿತರಿಸಲಾಗುವುದು. ಯಾವುದೇ ಲೋಪದೋಷ ಬಾರದಂತೆ ಎಚ್ಚರ ವಹಿಸಿ ಕಾರ್ಡ್‌ದಾರರಿಗೆ ತೊಂದರೆಯಾಗದಿರುವಂತೆ ವಿತರಕರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಅಂತ್ಯೋದಯ ಸಹಿತ ಬಿಪಿಎಲ್ ಪಡಿತರ ಚೀಟಿಗಳಿಗೆ 1ರಂತೆ ಆಹಾರ ಪೂರೈಸಬೇಕು. ಗೋದಿ ಇರುವುದಿಲ್ಲ ಎಂದು ತಿಳಿಸಿದರು.
ವಿತರಕರ ಸಂಘದ ಅಧ್ಯಕ್ಷ ಅಜ್ಜೇಗೌಡ ಗ್ರಾಮೀಣ ಪ್ರದೇಶದ ದೂರದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸರಬರಾಜುಗೊಳಿಸುವ ಕಮಿಷನ್ ಹೆಚ್ಚಳ ಮಾಡದಿದ್ದರೆ ಸಾಗಾಟಕ್ಕೆ ಅಸಾಧ್ಯವಾಗಿದೆ ಎಂದು ಗಮನ ಸೆಳೆದಾಗ ಈ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement