ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಂಗ್ರಹಿತ ಮರಳು ವಿತರಿಸಿ'

Lingaraj Badiger
Updated On : 5 Jul 2013, 11:13 am

ಮೂಡಿಗೆರೆ: ತಾಲೂಕಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಇಲಾಖೆ ಸ್ಥಳೀಯರಿಗೆ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಜಿ.ಎಚ್. ಹಾಲಪ್ಪಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ಮಾಫಿಯದಿಂದ ಹೇಮಾವತಿ ನದಿ ಪಾತ್ರವನ್ನೇ ಬದಲಾಯಿಸಿಕೊಂಡಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ನೇತೃತ್ವದ ತಂಡ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ಮೌಲ್ಯದ ಮರಳನ್ನು ವಶಕ್ಕೆ ತೆಗೆದುಕೊಂಡಿದ್ದು, ಪಟ್ಟಣ ಹಾಗೂ ಚಿಕ್ಕಮಗಳೂರು ಪ್ರವಾಸಿ ಮಂದಿರಗಳಲ್ಲಿ ಸಂಗ್ರಹಿಸಿದೆ.
ಆ ಮರಳನ್ನು ತಾಲೂಕಿನ 29 ಗ್ರಾಪಂ ಹಾಗೂ ಪಟ್ಟಣ ಪಂಚಾಯಿತಿ ಜನರಿಗೆ ವಿತರಿಸಿದಲ್ಲಿ ಆಶ್ರಯ ಯೋಜನೆ, ಬಸವ ಯೋಜನೆ ಮನೆಗಳು ಸೇರಿದಂತೆ ಹಲವು ಕಾಮಗಾರಿಗಳಿಗೆ ಮರಳು ಉಪಯೋಗವಾಗುತ್ತದೆ. ಲಾರಿಗಳ ಸಾಗಾಟ, ಜಿಲ್ಲೆ ಹಾಗೂ ರಾಜಾಧಾನಿಗಳಿಗೆ ಮರಳು ವಿತರಿಸಿದಲ್ಲಿ ಅಕ್ರಮಗಳಿಗೆ ಅನೂಕೂಲತೆಗಳು ಹೆಚ್ಚಾಗುವುದರಿಂದ ತಾಲೂಕಿಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement