ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಸ್ತೆ ಮಧ್ಯೆ ಗಿಡನೆಟ್ಟು ಪ್ರತಿಭಟನೆ

Lingaraj Badiger
Updated On : 6 Jul 2013, 10:58 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.5
ಕೆಸರಿನಿಂದ ಆವೃತ್ತವಾಗಿ ಸಂಚಾರಕ್ಕೆ ಅಡಚಣೆಯಾಗಿರುವ ರಸ್ತೆಯಲ್ಲಿ ಸಾರ್ವಜನಿಕರು ಗಿಡನೆಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಉಪ್ಪಳ್ಳಿಯ ನಯನಾ ಮೋಟಾರ್ಸ್ ಬಳಿ, ಸ್ಥಳೀಯ ನಿವಾಸಿಗಳು ಮತ್ತು ಅಂಗಡಿ ಮಾಲೀಕರುಗಳು ಜೆಡಿಎಸ್ ಮುಖಂಡ ಕೆ. ಭರತ್ ನೇತೃತ್ವದಲ್ಲಿ ಬೆಳಿಗ್ಗೆ ಕೆಸರು ಗದ್ದೆಯಾಗಿದ್ದ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸಿ, ಶಾಸಕರ ಪ್ರತಿಕೃತಿ ದಹಿಸಿದರು.
ಉಪ್ಪಳ್ಳಿಯ ರಸ್ತೆ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಕೆಸರು ಗೆದ್ದೆಯಾಗಿದ್ದು, ನಾಗರಿಕರು ತಿರುಗಾಡಲು ಹೆಣಗಾಡಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಒಂದು ವಾರದೊಳಗೆ ರಸ್ತೆ ದುರಸ್ತಿ ಪಡಿಸದ್ದಿದ್ದಲ್ಲಿ ಈ ಪ್ರದೇಶದ ಅಂಗಡಿಗಳು ಬಂದ್ ಮಾಡುವ ಜೊತೆ ಶಾಸಕರಿಗೆ ದಿಗ್ಬಂಧನ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶಾಸಕರ ನಿರ್ಲಕ್ಷ್ಯ: ನಂತರ ಕೆ. ಭರತ್ ಮಾತನಾಡಿ, ಕಳೆದ 17 ವರ್ಷಗಳ ಹಿಂದೆಯೇ ಈ ಬಡಾವಣೆ ನಗರಸಭೆ ವ್ಯಾಪ್ತಿಗೆ ಸೇರಿದೆ. ಗ್ರಾಮೀಣ ಪ್ರದೇಶದ ರಸ್ತೆಗಳಿಗಿಂತ ಹೆಚ್ಚಾಗಿ ಇಲ್ಲಿನ ರಸ್ತೆಗಳು ಹದೆಗೆಟ್ಟಿದೆ. ಇಲ್ಲಿ ವಾಸಿಸುತ್ತಿರುವ ನಾಗರಿಕರು ಮೂಲಭೂತ ಸೌಕರ್ಯ ವಂಚಿತರಾಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇಲ್ಲಿನ ನಗರಸಭಾ ಸದಸ್ಯರನ್ನು ಮರು ಆಯ್ಕೆಮಾಡಿರುವುದು ವಿಪರ್ಯಾಸ ಮತ್ತು ಶಾಸಕರು ಮೂರು ಬಾರಿ ಆಯ್ಕೆಯಾದರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳು ಚುನಾವಣೆ ಪೂರ್ವದಲ್ಲಿ ಭರವಸೆಯ ಮಹಾಪೂರವೇ ಹರಿಸಿದ್ದರು. ಗೆದ್ದ ಮೇಲೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಸ್ಥಳೀಯರ ಸಮಸ್ಯೆ ಅರಿತು ಕೂಡಲೆ ಸ್ಪಂದಿಸದಿದ್ದರೆ ಮುಂದಾಗುವ ಅನಾಹುತಕ್ಕೆ ಜನಪ್ರತಿನಿಧಿ ಮತ್ತು ಅಧಿಕಾರಿಗಳೆ ಹೊಣೆ ಎಂದು ಎಚ್ಚರಿಸಿದರು. ಮುಖಂಡರಾದ ರಾಜಣ್ಣ, ತನ್ವೀರ್, ಸಮೀರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement