ಭೂಕುಸಿತ: ಜಿಲ್ಲಾಧಿಕಾರಿ ಪರಿಶೀಲನೆ
ಕೊಪ್ಪ: ಅತೀ ಮಳೆಯಿಂದ ತಾಲೂಕಿನ ಗುಡ್ಡೇತೋಟ ಗುಂಡಪ್ಪ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಸಂಪೂರ್ಣ ಭೂಕುಸಿತಕ್ಕೊಳಗಾಗಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ವಿ. ಯಶ್ವಂತ್ ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.
ಈ ಪ್ರದೇಶದಲ್ಲಿ ಅಪಾಯದ ಅಂಚಿನಲ್ಲಿ ವಾಸಮಾಡುತ್ತಿರುವರ ಮನೆಗಳನ್ನು ಕೂಡಲೇ ಸ್ಥಳಂತಾರ ಮಾಡಿ ಪರ್ಯಾವ್ಯವಸ್ಥೆಯ ಕಲ್ಪಿಸುವಂತೆ ತಾಹಶೀಲ್ದಾರಿ ಶ್ರೀಧರ್ ಪಂಡಿತ್ಗೆ ಸೂಚನೆ ನೀಡಿದರು.
ಭೂಕುಸಿತಕ್ಕೊಳಗಾಗಿರುವ ಪ್ರದೇಶ ಮೇಲ್ಬಾಗದಲ್ಲಿರುವ 16 ಮನೆಗಳ ಪೈಕಿ ಪದ್ಮ ಐತಾಪ್ಪ, ನಾರಾಯಣ ಪೂಜಾರಿ, ಶೇಷಪ್ಪ ರವರ ಮನೆಗಳಿರುವ ಜಾಗದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯುವ ಲಕ್ಷಣಗಳು ಇರುವುದರಿಂದ ಈ ಮೂರು ಕುಟುಂಬಗಳನ್ನು ಸ್ಥಳಾಂತರಿಸಲು ಸೂಚಿಸಲಾಯಿತು.
ಕೊಗ್ರೆಯಲ್ಲಿ ಖಾಲಿ ಇರುವ ಸಾರ್ವಜನಿಕ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುಲು ವ್ಯವಸ್ಥೆಯನ್ನು ಮಾಡಿಕೊಂಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾ ಉಪಾವಿಭಾಗಧಿಕಾರಿ ಡಾ.ಪ್ರಶಾಂತ್, ಕೃಷಿ ಹಿರಿಯ ಸಹಾಯಕ ನಿರ್ದೇಶಕ ಸತ್ಯನಾರಯಣ್ ರಾವ್, ಆರ್.ಐ. ಶೇಷಗಿರಿ, ಗುಡ್ಡೇತೋಟ ಅಭಿವೃದ್ದಿ ಅಧಿಕಾರಿ ಮಹೇಶ್, ಅಧ್ಯಕ್ಷ ರವೀಂದ್ರ, ತಾಪಂ ಸದಸ್ಯ ಬಿ.ಆರ್. ನಾರಯಾಣ್, ಮತ್ತಿತರೆ ಅಧಿಕಾರಿಗಳು ಹಾಜರಿದ್ದಾರು.