ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Mainashree
Updated On : 7 Jul 2013, 11:22 am

ಜಿಲ್ಲೆಯಾದ್ಯಂತ ಸಾಧಾರಣ ಮಳೆ
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಶನಿವಾರ ಸಾಧಾರಣ ಮಳೆಯಾಗಿದೆ. ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ್ದು, ಮಲೆನಾಡಿನಲ್ಲಿ ಹರಿಯುತ್ತಿರುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ. ಬಯಲುಸೀಮೆಯಲ್ಲಿ ಮಳೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಿದೆ. ಆದರೆ, ಮಲೆನಾಡಿನಲ್ಲಿ ಮಾತ್ರ ಆಗಾಗ ತುಂತುರು ಹನಿಯಂತೆ ಬರುತ್ತಿತ್ತು.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದಿರುವ ಮಳೆಯ ವಿವರ ಈ ಕೆಳಕಂಡಂತೆ ಇದೆ.
ಚಿಕ್ಕಮಗಳೂರು ನಗರ- 15.5 ಮಿ.ಮೀ., ಜೋಳ್ದಾಳ್- 27.4, ಆಲ್ದೂರು- 18.3,  ಅತ್ತಿಗುಂಡಿ- 23.3, ಸಂಗಮೇಶ್ವರಪೇಟೆ- 54, ಸಖರಾಯಪಟ್ಟಣ- 3.4,  ಕೊಪ್ಪ- 53, ಹರಿಹರಪುರ- 69.1, ಜಯಪುರ- 88.5, ಕಮ್ಮರಡಿ- 98.3, ಬಸರೀಕಟ್ಟೆ- 68.9, ಶೃಂಗೇರಿ- 145, ಕಿಗ್ಗಾ- 186.9, ಕೆರೆಕಟ್ಟೆ- 136.8, ಶಿವನಿ- 5.5, ಮೂಡಿಗೆರೆ- 41, ಕೊಟ್ಟಿಗೆಹಾರ- 31, ಜಾವಳಿ-  40, ಕಳಸ- 55.4,  ಎನ್.ಆರ್.ಪುರ- 23, ಬಾಳೆಹೊನ್ನೂರು- 65, ಮೇಗರಮಕ್ಕಿಯಲ್ಲಿ 60 ಮಳೆಯಾಗಿದೆ.
ಅರ್ಜಿ ಆಹ್ವಾನ
ಕೊಪ್ಪ: 2013-14 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಸಮಗ್ರ ಪೀಡೆ ನಿರ್ವಹಣೆ ಕಾರ್ಯಕ್ರಮದಡಿಯಲ್ಲಿ ಮೈಲುತ್ತುತ್ತಕ್ಕೆ ಸಹಾಯಧನದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ.ಕೆ. ತಿಳಿಸಿದರು.
ಎನ್.ಎಚ್.ಎಂ ಯೋಜನೆಯಡಿ ಮೈಲುತ್ತುತಕ್ಕೆ ಶೇ.50 ಸಹಾಯಧನ ಪಡೆಯ ಬಯಸುವ ರೈತರು ಜುಲೈ 15ರಿಂದ 27 ರವರೆಗೆ ಅರ್ಜಿ ನೀಡಬೇಕಾಗಿದ್ದು, ಅರ್ಜಿಯನ್ನು ಕಸಬಾ ಹೋಬಳಿಯವರು ತಾಲೂಕು ಕೃಷಿ ಇಲಾಖೆಯಲ್ಲಿ ಸಲ್ಲಿಸಬಹುದಾಗಿದೆ. ಮೇಗುಂದಾ ಹಾಗೂ ಹರಿಹರಪುರ ಹೋಬಳಿಯಗೆ ಸಂಬಂಧಿಸದ ಗ್ರಾಪಂ ನಲ್ಲಿ ರೈತರು ಅರ್ಜಿ ಪಡೆದು ಅಲ್ಲಿಯೇ ವಾಪಸ್ಸು ನೀಡಬಹುದಾಗಿದೆ. ಅರ್ಜಿಯೊಂದಿಗೆ ಮೈಲುತುತ್ತ ಖರೀದಿಸಿದ ಟಿನ್. ಸಂಖ್ಯೆ ಇರುವ ಬಿಲ್‌ನ ಮೂಲ ಪ್ರತಿ, ಅಡಿಕೆ, ಕಾಳುಮೆಣಸು ಎಂದು ನಮೂದಿಸಿದ ಪಹಣಿ, ಪಹಣಿಯಲ್ಲಿ ಬೆಳೆ ಇಲ್ಲದಿದ್ದಲ್ಲಿ ಬೆಳೆ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಜಂಟಿ ಖಾತೆ ಇರುವವರು ಇತರಿಂದ ಒಪ್ಪಿಗೆ ಪತ್ರ ತಯಾರಿಸಿ ಸಹಿಮಾಡಿಸಿ, ರು. 20 ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿದ ಛಾಪಾಕಾಗದ, ಇತ್ತೀಚಿನ ಪಾಸ್‌ಪೋರ್ಟ್ ಸೈಜ್ 2 ಭಾವಚಿತ್ರ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement