ಅವಧಿ ವಿಸ್ತರಣೆ
ಚಿಕ್ಕಮಗಳೂರು: ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರದ ಗ್ರಾಮೀಣ ಅಥವಾ ಪಟ್ಟಣ ಪ್ರದೇಶದಲ್ಲಿ ವಾಸವಾಗಿರುವ ವಿದ್ಯಾವಂತ ನಿರುದ್ಯೋಗಿಗಳಿಂದ ಸ್ವಯಂ ಉದ್ಯೋಗ ಸ್ಥಾಪನೆಯ ಸಂಬಂಧ ಕೈಗಾರಿಕಾ ಘಟಕ, ಕೈಗಾರಿಕೆ ಆಧಾರಿತ ಸೇವಾ ಘಟಕ ಸ್ಥಾಪಿಸಲು ಸಾಲ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಲು ನಿಗಧಿಪಡಿಸಲಾಗಿದ್ದ ಕೊನೆಯ ದಿನವನ್ನು ಜುಲೈ 15 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತರಬೇತಿ
ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವಿ ಪಡೆದು 2 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿ ಅವಧಿಯಲ್ಲಿ ಒಂದು ಸಾವಿರ ತರಬೇತಿ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 8 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ಕಟ್ಟಡ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
10ರಂದು ಸ್ವರ್ಣ ಬಿಂದು ಪ್ರಾಶನ
ಶಿವಮೊಗ್ಗ: ಟಿಎಂಎಇಎಸ್ ಕಾಲೇಜು ಮತ್ತು ಆಸ್ಪತ್ರೆ ಹರಪನಹಳ್ಳಿ ತೆಗ್ಗಿನಮಠದ ಶ್ರೀ ಚಂದ್ರಮೌಳೇಶ್ವರ ಮಹಾಸ್ವಾಮಿಗಳ ಅಮೃತ ಮಹೋತ್ಸವದ ಅಂಗವಾಗಿ ಜುಲೈ 10ರಂದು ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ನಗರದ ನಾಲ್ಕು ಕೇಂದ್ರಗಳಲ್ಲಿ ಸ್ವರ್ಣ ಬಿಂದು ಪ್ರಾಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳ ರೋಗ ನಿರೋಧಕ ಶಕ್ತಿ ಹಾಗೂ ಸ್ಮರಣಶಕ್ತಿ ವೃದ್ಧಿಗಾಗಿ ಸ್ವರ್ಣ ಬಿಂದು ಪ್ರಾಶನ ಏರ್ಪಡಿಸಿದ್ದು, ಜಯನಗರ ಮುಖ್ಯರಸ್ತೆಯ ಜೋಷಿ ಆಯುರ್ ಕೇರ್(ಡಾ. ಸದಾನಂದ, ಎಸ್. ಜೋಷಿ, 9880539802), ರವಿವರ್ಮ ರಸ್ತೆಯಲ್ಲಿರುವ ನಿರ್ಮಲ ಕ್ಲಿನಿಕ್ (ಡಾ. ಪ್ರಶಾಂತ್, 9964686518), ಗಾಯಿತ್ರಿ ಕ್ಲಿನಿಕ್ (ಡಾ. ಶಶಿಧರ್, 984510578) ಇಲ್ಲಿ ಪ್ರಾಶನ ನೀಡಲಾಗುವುದು ಎಂದು ಕಾಲೇಜು ತಿಳಿಸಿದೆ.
ಕಾರ್ಯಾಗಾರ
ಶಿವಮೊಗ್ಗ: ಸವಳಂಗ ರಸ್ತೆಯಲ್ಲಿರುವ ಮೆಗಾಮಾರ್ಟ್ ಮೇಲಿರುವ ಟಾಪರ್ಸ ಕೋಚಿಂಗ್ಸೆಂಟರ್‌ನಲ್ಲಿ ಜುಲೈ 8ರಂದು ಸಂಜೆ 4ಕ್ಕೆ ಐಬಿಪಿಎಸ್-ಪಿಒ ಪರೀಕ್ಷೆಗೆ ಸಂಬಂಧಿಸಿದಂತೆ ಕಾರ್ಯಾಗಾರ ಮತ್ತು ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್‌ನ ಕೆ. ರಾಕೇಶಶ್ತಿಳಿಸಿದ್ದಾರೆ. ವಿವರಗಳಿಗಾಗಿ 9164689999.