ಕೊಂಬೆಯೊಂದು ಹಣ್ಣು ಎಂಟು..!
ಮೂಡಿಗೆರೆ: ಬಯಲು ಸೀಮೆಯ ಸಕರಾಯಪಟ್ಟಣದ ಹಲಸು ಎಂದರೆ ಎಂಥವರ ಬಾಯಲ್ಲೂ ನೀರೂರಿಸುತ್ತದೆ. ಮರದಲ್ಲಿ ಬೆಳೆಯುವ ಹಲಸನ್ನು ಕೀಳಬೇಕಾದರೆ ಮರ ಹತ್ತಿ ಸರ್ಕಸ್ ಮಾಡಬೇಕು.
ಆದರೆ, ತಾಲೂಕಿನ ಬಣಕಲ್ ಗ್ರಾಮದ ಸಬ್ಬೇನಹಳ್ಳಿ ಸಮೀಪವಿರುವ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಬೆಳೆದಿರುವ ಭಾರಿ ಗಾತ್ರದ ಹಲಸಿನ ಹಣ್ಣುಗಳು ಮರದ ಮೇಲೆ ಮತ್ತು ಮರದ ಬುಡದಲ್ಲಿ ಬೆಳೆಯುತ್ತಿದ್ದು ಒಂದು ಮರದಲ್ಲಿ 50- 60 ಹಲಸಿನ ಹಣ್ಣುಗಳು ಬೆಳೆಯುತ್ತವೆ.
35 ಮರಗಳಲ್ಲಿ ಹಣ್ಣುಗಳು ಬೆಳೆಯುತ್ತಿದ್ದು. 1994 ರಲ್ಲಿ ಈ ಮರಗಳನ್ನು ನೆಟ್ಟಿದ್ದು ನಾಲ್ಕು ವರ್ಷದಲ್ಲೆ ಫಸಲು ಬಿಟ್ಟಿದ್ದು. ಅಂದಿನಿಂದ ಇಂದಿನವರೆಗೂ ಭಾರಿ ಗಾತ್ರದ ಹಲಸಿನ ಹಣ್ಣುಗಳು ಈ ಮರಗಳಲ್ಲಿ ಒಂದೆ ಕೊನೆಯಲ್ಲಿ 6-8 ಕ್ಕೂ ಅಧಿಕವಾಗಿ ಬಿಡುತ್ತಿವೆ. ಮಲೆನಾಡಿಗೆ ಇದು ನಿಜಕ್ಕೂ ಆಶ್ಚರ್ಯವೇ ಸರಿ.