ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಾಗತೀಕರಣದಿಂದ ಸಣ್ಣ ಕೈಗಾರಿಕೆಗೆ ಸಂಕಷ್ಟ

Lingaraj Badiger
Updated On : 8 Jul 2013, 11:16 am

ಕ.ಪ್ರ.ವಾರ್ತೆ, ಕೊಪ್ಪ, ಜು.7
ಜಾಗತೀಕರಣದ ಕರಿ ನೆರಳಿನಿಂದ ಸ್ಥಳೀಯತೆ ಮಾಯವಾಗುವ ಜೊತೆಗೆ ರೈತರ ಮತ್ತು ಸಣ್ಣ ಕೈಗಾರಿಕೆಗಳ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲದೇ ಸ್ಥಳೀಯರು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಜಾನಪದ ಪರಿಷತ್ ವತಿಯಿಂದ ಶನಿವಾರ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಂಡಿದ್ದ  ಮಳೆಗಾಲಕ್ಕೊಂದು ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾರುಕಟ್ಟೆ ಕೊರತೆ: ವಿದೇಶೀ ಬಂಡಾವಾಳಶಾಹಿಗಳು ಭಾರತದ ಮಧ್ಯಮ ವರ್ಗವನ್ನು ಆಧಾರವಾಗಿಟ್ಟುಕೊಂಡು ನಮ್ಮ ದೇಶದಲ್ಲಿ ಬಂಡಾವಾಳ ಹೂಡಿ ಏಕ ಅರ್ಥಿಕ ನೀತಿಯನ್ನು ಅನುಸರಿಸತೊಡಗಿದ್ದರ ಪರಿಣಾಮ ಸ್ಥಳೀಯವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಹಾಗೂ ಸಣ್ಣಕೈಗಾರಿಕೆಗಳಲ್ಲಿ ಉತ್ಪಾದನೆಗಳಿಗೆ ಮಾರುಕಟ್ಟೆ ಇಲ್ಲದಂತೆ ಅಗಿದೆ ಎಂದು ಹೇಳಿದರು.
ಶಿಕ್ಷಣ ಮಾಧ್ಯಮ, ಚಿತ್ರ ಮಾಧ್ಯಮಗಳಂತಹ ಎಲ್ಲವೂ ಕೂಡ ಉದ್ಯಮಗಳಾಗಿ ಮಾರ್ಪಟ್ಟಿದೆ ಇಲ್ಲಿ ಸಂವೇದನೆಗೆ ಬೆಲೆ ಕಳೆದುಕೊಂಡಿದ್ದು, ಸಂಪಾದನೆಯೇ ಗುರಿ ಎಂಬಂತೆ ಅಗಿದೆ ಎಂದರು.
ತಲಾ ಆದಾಯ ರು. 20: ವಿಶ್ವದಲ್ಲಿ ಭಾರತ ಮುಂದುವರಿಯುತ್ತಿರುವ ದೇಶದಲ್ಲಿ ಒಂದಾಗಿದ್ದರೂ, ದೇಶದ ಜನಸಂಖ್ಯೆಯ ಶೇ.77 ರಷ್ಟು ಜನರ ಸರಾಸರಿ ತಲಾ ಆದಾಯ ರು. 20 ಆಗಿದೆ ಎಂದು ತಜ್ಞರ ವರದಿ ಹೇಳುತ್ತಿದೆ ಎಂದರು.
ಬಂಡಾವಳ ಹೂಡಿದ ರಾಷ್ಟ್ರಗಳು ತಮ್ಮ ಉತ್ಪನ್ನಗಳಿಗೆ ನಮ್ಮ ದೇಶದಲ್ಲಿ ಮಾರುಕಟ್ಟೆ ಸೃಷ್ಟಿಸಿ, ಲಾಭ ಮಾಡಿಕೊಂಡು ಉದ್ಧಾರವಾಗುತ್ತಿದೆಯೇ ಹೊರತು ನಮ್ಮ ರಾಷ್ಟ್ರ ಅರ್ಥಿಕ ಪ್ರಗತಿ ಹೊಂದಿಲ್ಲ. ನಮ್ಮ ಸಂಸ್ಕೃತಿ,ಧಾರ್ಮಿಕತೆ, ಕೃಷಿಕರು, ಸಣ್ಣ ಕೈಗಾರಿಕೆಗಳು ಜಾಗತೀಕರಣದ ಕರಿ ನೆರಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುವ  ಹಂತಕ್ಕೆ ತಲುಪಿದರೂ ರಾಜಕಾರಣಿಗಳು ಎಚ್ಚೆತ್ತುಕೊಳ್ಳದೇ ವಿದೇಶೀ ಬಂಡವಾಳ ಹೂಡಿಕೆ ಇನ್ನಷ್ಟು ಪ್ರೋತ್ಸಾಹ ನೀಡುತ್ತಿರುವುದು ಶೋಚಾನೀಯ ಎಂದರು.
ಬರಗೂರು ರಾಮಚಂದ್ರಪ್ಪ ಮತ್ತು ಚಲನಚಿತ್ರ ಸಂಭಾಷಣೆಕಾರ ಸತ್ಯಮೂರ್ತಿ ಆನಂದೂರು ಅವರನ್ನು ಅಭಿನಂದಿಸಲಾಯಿತು. ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಅಧ್ಯಕ್ಷ ಎಚ್.ಎಸ್. ಕಳಸಪ್ಪ ವಹಿಸಿದ್ದರು. ಜಿಲ್ಲಾ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಗೌರವಾಧ್ಯಕ್ಷ ಎಚ್.ಜಿ. ವೆಂಕಟೇಶ್, ಲಯನ್ಸ್ ಅಧ್ಯಕ್ಷ ದಯಾನಂದ ಹೆಗ್ಡೆ, ರೈತ ಸಂಘದ ಕ್ಷೇತ್ರಾಧ್ಯಕ್ಷ ಕೆ.ಸಿ. ಸತೀಶ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement