ಬೋದಗಯಾ ಬಾಂಬ್ ಸ್ಫೋಟಕ್ಕೆ ಖಂಡನೆ
ಶೃಂಗೇರಿ: ಬಿಹಾರದ ಬೋದಗಯಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವನ್ನು ಬಿಜೆಪಿ ನಗರ ಮೋರ್ಚಾ, ಯುವ ಭಾರತ್ ಸಂಘಟನೆ ತೀರ್ವವಾಗಿ ಖಂಡಿಸಿವೆ.
ನಗರ ಮೋರ್ಚಾ ಅಧ್ಯಕ್ಷ ಮುರುಳಿಧರ್ಪೈ ಈ ಘಟನೆಯನ್ನು ಖಂಡಿಸಿ ಮಾತನಾಡಿ, ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಇಂತಹ ವಿಧ್ವಂಸಕ ಕೃತ್ಯ ಎಸಗಿ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿರುವುದು ಖಂಡನೀಯವಾಗಿದೆ. ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಉಗ್ರಗಾಮಿಗಳ ಇಂತಹ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಭದ್ರಾತಾ ವ್ಯವಸ್ಥೆಯನ್ನು ಬಿಗುಗೊಳಿಸಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಮ್ಮ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.