ಭ್ರಷ್ಟಾಚಾರ ತಡೆಗೆ ಯುವಕರು ಮುಂದಾಗಲಿ
ಮೂಡಿಗೆರೆ: ದೇಶದೆಲ್ಲಡೆಯೂ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಮತ್ತು ಅದರ ವಿರುದ್ಧ ಹೋರಾಟ ನಡೆಸಲು ಯುವಕರು ಮುಂದೇ ಬರಬೇಕು ಎಂದು ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಟಿ. ಗೋವಿಂದ ಕರೆ ನೀಡಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು. ಭ್ರಷ್ಟಾಚಾರ ವಿರುದ್ದ ಸೆಣೆಸಾಡಲು ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ್, ಮಹಿಲಾ ಯೋಗ ಸಮಿತಿ, ಕಿಸಾನ್ ಪಂಚಾಯಿತ್ ನೈತಿಕವಾಗಿ ಸದೃಢಗೊಂಡು ಬಲಶಾಲಿ ಹೋರಾಟ ರೂಪಿಸುತ್ತಿದೆ ಎಂದರು.
ಜುಲೈ 9 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿಯ ಕಡಿಯಾಳಿ ದೇಗುಲದ ಆವರಣದಲ್ಲಿ ಯುವ ಭಾರತ್ ಸೆಮಿನಾರ್ ನಡೆಯಲಿದ್ದು. ಈ ಸೆಮಿನಾರ್ನಲ್ಲಿ ಹರಿದ್ವಾರದ ಡಾ. ಸುಮನಾಜಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷ ಬಸವರಾಜ್, ಮಂಜು ಉಪಸ್ಥಿತರಿದ್ದರು.