ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಯುವಕರ ಮೇಲೆ ಜವಾಬ್ದಾರಿ ಹೆಚ್ಚು'

Lingaraj Badiger
Updated On : 8 Jul 2013, 11:07 am

ಕ.ಪ್ರ. ವಾರ್ತೆ  ಬಾಳೆಹೊನ್ನೂರು, ಜು.7
ಜೀವನದಲ್ಲಿ ತಂದೆ ತಾಯಿಗಳ ಋಣ ತೀರಿಸಿದಂತೆ ಸಮಾಜದ ಋಣ ತೀರಿಸುವ ಗುರುತರ ಜವಾಬ್ದಾರಿ ನಾಗರಿಕರ ಮೇಲಿದೆ ಎಂದು ರೋಟರಿ ಜಿಲ್ಲೆ 3180 ಮಾಜಿ ರಾಜ್ಯಪಾಲ ಜ್ಞಾನವಸಂತಶೆಟ್ಟಿ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಸ್ಥಳೀಯ ರೋಟರಿ ಕ್ಲಬ್ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾಯಕನಿಗೆ ಜವಾಬ್ದಾರಿ ಇರಬೇಕು: ಸಂಘ ಸಂಸ್ಥೆಗಳ ಒಡನಾಟದಿಂದ ಜೀವನಾನುಭವ ಪಡೆದು ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಬಹುದು. ಸಂಘ ಸಂಸ್ಥೆಗಳು ಸಮಾಜಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಮನೆಮಾತಾಗಬೇಕು. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಸಂಸ್ಥೆಯ ನಾಯಕನಿಗೆ ಇರಬೇಕು ಹೀಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ವಲಯ 10ರ ಉಪ ರಾಜ್ಯಪಾಲ ಡಾ. ಜಿ.ಸಿ. ಶರತ್ ಮಾತನಾಡಿ, ಅಂಧರಿಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ನೇತ್ರದಾನ ಬಗ್ಗೆ ಇರುವ ಮೂಡನಂಬಿಕೆಯನ್ನು ದೂರ ಮಾಡಿ ನೇತ್ರದಾನದ ಮಹತ್ವವನ್ನು ಸಾಮಾನ್ಯ ಜನರಿಗೆ ಅರಿವು ಮೂಡಿಸುವಲ್ಲಿ ರೋಟರಿ ಸಂಸ್ಥೆ ಮುಂದಾಗಬೇಕೆಂದು ಕರೆ ನೀಡಿದರು.
ದೇಣಿಗೆ ನೀಡಿ: ವಲಯಾಧಿಕಾರಿ ಎಚ್.ಎಸ್. ಮೋಹನ್ ಮಾತನಾಡಿ, ದುಡಿದ ಸಂಪತ್ತಿನಲ್ಲಿ ಸಮಾಜಕ್ಕೆ ಸ್ವಲ್ಪ ಭಾಗವನ್ನು ಅರ್ಪಿಸಿಕೊಳ್ಳಬೇಕು. ಹೃದಯ ಶ್ರೀಮಂತಿಕೆಯಿಂದ ಸಾರ್ವಜನಿಕ ಸೇವೆಗೆ ದೇಣಿಗೆ ನೀಡಬೇಕೆಂದು ಹೇಳಿದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಪದವಿ ಪ್ರದಾನ ಮಾಡಿ ಡಾ. ಭುವನೇಶ್ವರಿ ಬಲ್ಲಾಳ್ ಮಾತನಾಡಿದರು. ರೋಟರಿ ನಿರ್ಗಮಿತ ಅಧ್ಯಕ್ಷ ಕೆ.ಕೆ. ವೆಂಕಟೇಶ್, ನೂತನ ಅಧ್ಯಕ್ಷ ಎಚ್.ಎಂ. ಇಬ್ರಾಹಿಂ, ಇನ್ನರ್ ವ್ಹೀಲ್ ನಿರ್ಗಮಿತ ಅಧ್ಯಕ್ಷೆ ಕವಿತಾ ಕೇಶವ್, ವೈಶಾಲಿ ವಿ. ಕುಡ್ವ ಮಾತನಾಡಿದರು.
ಇನ್ನರ್‌ವ್ಹೀಲ್ ಕಾರ್ಯದರ್ಶಿ ಸವಿತಾ ಮೂರ್ತಿ, ವಿದ್ಯಾ ಆರ್.ಪೈ, ರೋಟರಿ ಕಾರ್ಯದರ್ಶಿ ಎಂ.ವಿ. ತಿಮ್ಮಯ್ಯ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿವೇದಿತಾ ಗಜೇಂದ್ರ ಪ್ರಾರ್ಥಿಸಿದರು, ಎಸ್.ಜಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಎಚ್. ನಾಗೇಶ್ ವಂದಿಸಿದರು, ಎಚ್.ಎಚ್. ಕೃಷ್ಣಮೂರ್ತಿ, ವಿಲ್ಸನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement