ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕುಸಿಯುವ ಭೀತಿಯಲ್ಲಿ ಮಿನಿ ವಿಧಾನಸೌಧ

Lingaraj Badiger
Updated On : 9 Jul 2013, 10:59 am

ಕ.ಪ್ರ.ವಾರ್ತೆ, ಮೂಡಿಗೆರೆ, ಜು.8
ಮಿನಿ ವಿಧಾನ ಸೌಧದ ಸಿಬ್ಬಂದಿ ಮಳೆಗಾಲದಲ್ಲಿ ಕೊಡೆ ಹಿಡಿದು ಕೆಲಸ ಮಾಡಬೇಕಾಗಿದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ಮಿನಿ ವಿಧಾನಸೌಧದ ಕಳಪೆ ಕಾಮಗಾರಿಯಿಂದ ನಿರ್ಮಿಸಲಾಗಿದೆ.
ತಮ್ಮ ಕೆಲಸ ಕಾರ್ಯಗಳಿಗೆ ಬಂದ ಸಾರ್ವಜನಿಕರು ತಲೆಯ ಮೇಲೆ ಎಲ್ಲಿ ಛಾವಣೆ ಉದುರುವುದೇ ಎಂದು ಹೆದರಿ ದೇವರ ಮೇಲೆ ಭಾರ ಹಾಕಿ ಒಳ ಪ್ರವೇಶಿಸುತ್ತಾರೆ. ಅಧಿಕಾರದ ಕೇಂದ್ರ ಬಿಂದುವಾಗಿರುವ ಮೂಡಿಗೆರೆ ಮಿನಿ ವಿಧಾನಸೌಧದ ಕಟ್ಟಡ ಅಡಿಯಿಂದ ಮುಡಿಯವರೆಗೂ ದುರಸ್ತಿ ಮಾಡಬೇಕಾಗಿದೆ.
1995ರಲ್ಲಿ ನಿರ್ಮಿಸಿದ ಈ ಕಟ್ಟಡ ಕೇವಲ 18 ವರ್ಷಗಳಲ್ಲಿ ಅವನತಿಯ ಹಂತದಲ್ಲಿದೆ. ಬಿಡದೇ ಸುರಿಯುತ್ತಿರುವ ಮಳೆಗೆ ಕಟ್ಟಡದ ಮೇಲ್ಪದರಗಳು ಉದುರುತ್ತಿದ್ದು, ಯಾವ ಕ್ಷಣದಲ್ಲಾದರೂ ಕುಸಿಯಬಹುದು ಎಂಬಂತೆ ಕಾಣುತ್ತಿದೆ.
ಅದರ ಪಕ್ಕದಲ್ಲೆ ಇರುವ ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ನಿರ್ಮಿಸಿರುವ ಕಟ್ಟಡ ಇನ್ನು ಇನ್ನೂರು ವರ್ಷವಾದರೂ ಅಲುಗಾಡದ ರೀತಿಯಲ್ಲಿ ಗಟ್ಟಿಮುಟ್ಟಾಗಿ ನಿಂತಿದೆ. ಸರ್ಕಾರದ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಛತ್ರಿಯನ್ನು ಹಿಡಿದುಕೊಂಡು ಬರಲೇಬೇಕು. ಸಿಬ್ಬಂದಿ ಸೂರು ನೋಡುತ್ತಾ ಮಳೆ ಜೋರು ಬಂದಾಗ ಛತ್ರಿಯನ್ನು ತಮ್ಮ ರಕ್ಷಣೆಗೆ ತರಲೇಬೇಕಾಗಿದೆ. ತಹಸೀಲ್ದಾರ್ ಇರುವ ಕೊಠಡಿ ಸಹಾ ಶಿಥಿಲಾವಸ್ಥೆಯಲ್ಲಿದೆ.
ಡಕೋಟ ಜೀಪು: ತಾಲೂಕಿನ ದಂಡಾಧಿಕಾರಿಗಳಿಗೆ ಸರ್ಕಾರ ನೀಡಿರುವ ಜೀಪು ಹಳೆಯದಾಗಿದೆ. 17 ವರ್ಷಗಳ ಹಿಂದೆ ಕೊಟ್ಟಿರುವ ಈ ಜೀಪು ಈಗಾಗಲೇ 3 ಲಕ್ಷದ 70 ಸಾವಿರಕ್ಕೂ ಅಧಿಕ ಕಿ.ಮೀ. ಓಡಿದೆ. ಡಾಂಬರ್ ರಸ್ತೆಯಲ್ಲೇ ಸಾಗುವುದು ಬಹಳ ಕಷ್ಟ. ಈಗ ಮಲೆನಾಡಿನಲ್ಲಿ ಮಳೆ ಪ್ರಾರಂಭವಾಗಿದೆ.
ಪರಿಹಾರಕ್ಕೆ ಅಥವಾ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ತುರ್ತಾಗಿ ಧಾವಿಸಲು ತಹಸೀಲ್ದಾರ್ ತಮ್ಮ ಕಚೇರಿಯ ಜೀಪನ್ನು ತೆಗೆದುಕೊಂಡು ಹೋಗಿ ಮಧ್ಯದಾರಿಯಲ್ಲೇ ನಿಂತ ಮೇಲೆ ನಂತರ ಬೇರೆ ಇಲಾಖೆ ಜೀಪನ್ನು ತೆಗೆದುಕೊಂಡು ಹೋಗಿರುವ ಉದಾಹರಣೆಗಳು ಬಹಳಷ್ಟಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement