ಕಳವು ಪ್ರಕರಣ: ಇಬ್ಬರ ಬಂಧನ
ಶೃಂಗೇರಿ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸರು ಸೋಮವಾರ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ವೈಕುಂಠಪುರ ಚಂದ್ರಶೇಖರ ರಾವ್ ಎಂಬುವವರ ಮನೆಯಿಂದ ಸುಮಾರು ನಾಲ್ಕುವರೆ ಕ್ವಿಂಟಲ್ ಅಡಕೆ ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಪತ್ತೆಗಾಗಿ ತನಿಕೆ ನಡೆಯುತ್ತಿತ್ತು. ಸೋಮವಾರ ಬೆಳಿಗ್ಗೆ ಶೃಂಗೇರಿಯಲ್ಲಿ ಪೊಲೀಸರು ದೇವೇಂದ್ರ ಹಾಗೂ ಇಬ್ರಾಹಿಂ ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರದ್ದಾರೆ.
ಸಿಪಿಐ ಎಸ್.ಎಸ್. ಹಿರೇಮಠ ನೇತೃತ್ವದಲ್ಲಿ ತನಿಖೆ ನಡೆದಿತ್ತು.