ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೊಲೆ ಆರೋಪಿ ಬಂಧನ

Lingaraj Badiger
Updated On : 10 Jul 2013, 10:47 am

ಕ.ಪ್ರ.ವಾರ್ತೆ, ತರೀಕೆರೆ, ಜು.9
ಕುತೂಹಲ ಕೆರಳಿಸಿದ್ದ ಮಹಿಳೆ ಕೊಲೆ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಬಂಧಿಸುವಲ್ಲಿ ತರೀಕೆರೆ ಪೋಲೀಸರು ಯಶಸ್ವಿಯಾಗಿದ್ದಾರೆ.
ರಫೀಕ್ ಯಾನೆ ಶಫಿ ಯಾನೆ ಚಟಾಕು ಬಂಧಿತ. ಈತ ತರೀಕೆರೆ ತಾಲೂಕಿನ ಸಿದ್ದರಹಳ್ಳಿ.ವನಾಗಿದ್ದ, ಪ್ರಸ್ತುತ ಭದ್ರಾವತಿಯ ದೇವನರಸೀಪುರದಲ್ಲಿ ವಾಸವಾಗಿದ್ದಾನೆ.
ಮೇ 22 ರಂದು ಪಟ್ಟಣದ ಸುಂದರೇಶ ಬಡಾವಣೆಯ ಲಕ್ಷ್ಮೀ ಯಾನೆ ದೇವಿಬಾಯಿ (40) ಎನ್ನುವವರನ್ನು ತರೀಕೆರೆ ಸಮೀಪ ಹಳೆಯೂರು ಬಳಿಯಲ್ಲಿರುವ ರೇಲ್ವೆ ಹಳಿಯಿಂದ ತುಸು ಹತ್ತಿರದಲ್ಲಿ ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಲಾಗಿತ್ತು.
ಈ ಸಂಬಂಧ ಶಿವಮೊಗ್ಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತರೀಕೆರೆ ಪೋಲೀಸ್ ಠಾಣೆಗೆ  ವರ್ಗವಾದ ಹಿನ್ನಲೆಯಲ್ಲಿ ಕೇಸಿನ ತನಿಖೆಯನ್ನು ತರೀಕರೆ ಪೊಲೀಸರು ಮುಂದುವರೆಸಿದರು.
ಆರೋಪಿ ಪತ್ತೆ: ಚಿಕ್ಕಮಗಳೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳು, ತರೀಕೆರೆ ಉಪ ವಿಭಾಗದ ಡಿವೈಎಸ್‌ಪಿ ಸದಾನಂದ ಬಿ.ನಾಯಕ್ ಅವರ ಮಾರ್ಗದರ್ಶನದಲ್ಲಿ ತರೀಕೆರೆ ಪೊಲೀಸ್ ನಿರೀಕ್ಷಕ ಸುರೇಶ್ ಮತ್ತು ಸಿಬ್ಬಂದಿ  ಮೂರ್ತಪ್ಪ, ಗಿರೀಶ್, ಮಂಜುನಾಥ್  ಉಲ್ಲಾಸ್, ರಾಜ್‌ಕುಮಾರ್ ಅವರು ತನಿಖೆ ನಡೆಸಿ ಕೊಲೆ  ಆರೋಪಿಯನ್ನು  ಭದ್ರಾವತಿಯಿಲ್ಲಿ  ಜುಲೈ 9 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.    
ವಾಹನಗಳ ವಶ: ಜುಲೈ 9 ರಂದು ತರೀಕೆರೆ ಉಪವಿಭಾಗದ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ತರೀಕೆರೆ ಠಾಣೆಯ ಪೊಲೀಸ್ ನಿರೀಕ್ಷಕ ಎಚ್.ಎಸ್..ಸುರೇಶ್, ಪಿಎಸ್‌ಐ ಉಲ್ಲಾಸ್ ಆರ್ ಪರವಾರ ಮತ್ತು ಸಿಬ್ಬಂದಿ  ಗಿರೀಶ್, ಮಂಜುನಾಥ್, ರಾಜ್‌ಕುಮಾರ್, ಸಿದ್ದಾನಾಯ್ಕ ಅವರು ಆರೋಪಿ ರಫೀಕ್ ಯಾನೆ ಶಫಿ ಯಾನೆ ಚಟಾಕು ವನ್ನು ದ್ವಿಚಕ್ರ ವಾಹನ ಸಹಿತ ಬಂಧಿಸಿದ್ದಾರೆ.
ಈತನನ್ನು ಬಂಧಿಸಿ ಒಂದು ಬಜಾಜ್ ಎಮ್-80, ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಬೆಲೆ ಅಂದಾಜು 50 ಸಾವಿರ ಎಂದು ಅಂದಾಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement