ಜಿಪಂ ಉಪಾಧ್ಯಕ್ಷರ ತಾಪಂ ಭೇಟಿ
ನರಸಿಂಹರಾಜಪುರ: ಜಿಪಂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮುತ್ತಿನಕೊಪ್ಪ ಜಿಪಂ ಸದಸ್ಯರಾದ ಸುಜಾತ ಶಿವಲಿಂಗಪ್ಪ ಇತ್ತೀಚೆಗೆ ತಾಪಂ ಭೇಟಿ ನೀಡಿದಾಗ ತಾಪಂ ಕಾರ್ಯನಿರ್ಹಣಾಧಿಕಾರಿ ವಿಜಯಕುಮಾರ್ ಮತ್ತು ಸಿಬ್ಬಂದಿ ಸ್ವಾಗತಿಸಿದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಸುಜಾತ ಶಿವಲಿಂಗಪ್ಪ, ಇದುವರೆಗೆ ನಾನು ಮುತ್ತಿನಕೊಪ್ಪ ಜಿಪಂ ಕ್ಷೇತ್ರಕ್ಕೆ ಮಾತ್ರ ಸೀಮಿತಳಾಗಿದ್ದೆ. ಇನ್ನು ಮುಂದೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಭಿವೃದ್ಧಿ ಬಗ್ಗೆ ಗಮನ ನೀಡಬೇಕಾಗಿದೆ. ಜಿಪಂ ಅಧ್ಯಕ್ಷರು ಮತ್ತು ಸದಸ್ಯರ ಸಲಹೆ, ಸಹಕಾರ ಪಡೆದು ಅಭಿವೃದ್ಧಿ ಕಾಮಗಾರಿ ಮಾಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಆದ್ಯತೆ ಮೇಲೆ ಪರಿಹಾರ ಕಾರ್ಯ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ತಾಪಂ ಲೆಕ್ಕಪರಿಶೋದಕ ಪಿ. ರಾಮಚಂದ್ರ, ವ್ಯವಸ್ಥಾಪಕಿ ಮೀನಾಕ್ಷಮ್ಮ, ತಾಲೂಕು ಸಂಯೋಜಕ ಮೋಗಣ್ಣಗೌಡ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.