ನಾಳೆ ಪದಗ್ರಹಣ ಸಮಾರಂಭ
ಕೊಪ್ಪ: ಇಲ್ಲಿನ ಲಯನ್ಸ್ ಕ್ಲಬ್ನಲ್ಲಿ ಪದಗ್ರಹಣ ಸಮಾರಂಭವನ್ನು ಪಟ್ಟಣದ ಲಕ್ಕವಳ್ಳಿ ಮಂಜಪ್ಪ ನಾಯ್ಕ ಸಭಾ ಭವನದಲ್ಲಿ ಜು.12 ರ ಸಂಜೆ 7 ಗಂಟೆ ಹಮ್ಮಿಕೊಳ್ಳಲಾಗಿದೆ ಎಂದು ನಿಕಟಪೂರ್ವ ಅಧ್ಯಕ್ಷ ಈ.ಟಿ. ಹಾಲಪ್ಪಗೌಡ ತಿಳಿಸಿದ್ದಾರೆ. ಅಧ್ಯಕ್ಷರಾಗಿ ರತ್ನಾಕರ್ ಆಯ್ಕೆಯಾಗಲಿದ್ದು, ಕಾರ್ಯದರ್ಶಿಯಾಗಿ ಎಂ.ಸಿ. ಅಶೋಕ್, ಖಜಾಂಚಿಯಾಗಿ ಡಿ.ಎನ್. ಜಯಂತ್ ಆಯ್ಕೆಯಾಗಲಿದ್ದಾರೆ. ಪದಾಧಿಕಾರಿಗಳಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಮಂಜುನಾಥ ಮೂರ್ತಿ ಪ್ರಮಾಣ ವಚನವನ್ನು ಬೋಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ಚುನಾವಣೆ
ತರೀಕೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ನಾಗರಾಜ್ ತಾಲೂಕು ಶಾಖೆ ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದಾರೆ. ನಾಮಪತ್ರಗಳ ವಿತರಣೆ- ಜುಲೈ 11 ರಿಂದ 15 ರ ಸಂಜೆ 4 ಗಂಟೆಯವರೆಗೆ, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜುಲೈ 15 ಸಂಜೆ 5 ಗಂಟೆಯವರೆಗೆ, ನಾಮಪತ್ರ ಪರಿಶೀಲನೆ- ಜುಲೈ 15, 5-30. ನಾಮಪತ್ರಗಳ ಪರೀಶೀಲನೆ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಣೆ. ನಾಮಪತ್ರಗಳನ್ನು ವಾಪಸ್ಸು ಪಡೆಯಲು ಜುಲೈ 16 ಸಂಜೆ 4. ನಾಮಪತ್ರಗಳನ್ನು ವಾಪಸ್ಸು ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟಣೆ ಜುಲೈ 16 ಸಂಜೆ 5 ಗಂಟೆಯ ನಂತರ. ಚುನಾವಣೆಯ ಸಮಯ ಜುಲೈ 22, ಬೆಳಿಗ್ಗೆ 11 ರಿಂದ ಸಂಜೆ 4 ರ ತನಕ. ಮತಗಳ ಎಣಿಕೆ- ಜುಲೈ 22 ಮಧ್ಯಾಹ್ನ 4-30 ರ ನಂತರ, ಮತ ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟಣೆ.