ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೆಳೆ ಬೆಳೆಯಲು ಉತ್ತಮ ಗೊಬ್ಬರ ಅಗತ್ಯ: ಶಿವಮೂರ್ತಿ

Lingaraj Badiger
Updated On : 11 Jul 2013, 10:53 am

ನರಸಿಂಹರಾಜಪುರ: ಯಾವುದೇ ಬೆಳೆ ಬೆಳೆಯಬೇಕಾದರೆ 17 ಪೋಷಕಾಂಶಗಳು ಅಗತ್ಯವಾಗಿದೆ ಎಂದು ಕೃಷಿ ಇಲಾಖೆ  ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ತಿಳಿಸಿದರು.
ಅವರು ಬುಧವಾರ ಸಂಕ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೃಷಿ ಇಲಾಖೆ ಆಶ್ರಯದಲ್ಲಿ ಭೂ ಚೇತನ ಕಾರ್ಯಕ್ರಮದಡಿ ಕೃಷಿ ಕ್ಷೇತ್ರ ಪಾಠಶಾಲೆ ಉದ್ಘಾಟನಾ ಸಮಾರಂಭದಲ್ಲಿ ಬತ್ತದ ಬೆಳೆಯ ಬಗ್ಗೆ ಮಾಹಿತಿ ನೀಡಿದರು.
ಗೊಬ್ಬರ ನೀಡಿ: ಬತ್ತದ ಬೆಳೆಗೆ ಮೊದಲ ಕಂತಿನಲ್ಲಿ ಮೂಲ ಗೊಬ್ಬರವಾಗಿ ಸಾರಜನಕ, ರಂಜಕ, ಪೊಟ್ಯಾಶ್ ಗೊಬ್ಬರ ಒದಗಿಸಲು ನಾಟೀ ಸಮಯದಲ್ಲಿ 15-30-35 ರ ಪ್ರಮಾಣದಲ್ಲಿ ನೀಡಬೇಕು. ಉಳಿದ ಸಾರಜನಕವನ್ನು ನಾಟಿಯಾದ 25 ರಿಂದ 30 ದಿನಗಳಲ್ಲಿ ಮೇಲು ಗೊಬ್ಬರವಾಗಿ 16.50 ಕೆ.ಜಿ ಹಾಗೂ ನಾಟಿಯಾದ 45 ರಿಂದ 50 ದಿನಗಳಲ್ಲಿ 16.50 ಕೆ.ಜಿ. ಸಾರಜನಕ ಗೊಬ್ಬರ ನೀಡಿದಲ್ಲಿ ಬತ್ತದ ಬೆಳೆಗೆ ಶಿಫಾರಸು ಮಾಡಿದ ಪ್ರಮಾಣ 30-30-35ರಷ್ಟು ನೀಡಿದಂತಾಗಿ ಉತ್ತಮ ಇಳುವರಿ ಪಡೆಯಬಹುದು ಎಂದು ಅವರು ವಿವರಿಸಿದರು.
ಉಪಯುಕ್ತ ಕಾರ್ಯಕ್ರಮ: ರೈತ ಕ್ಷೇತ್ರಪಾಠಶಾಲೆ ಉದ್ಘಾಟಿಸಿದ ಕಾನೂರು ಗ್ರಾಪಂ ಉಪಾಧ್ಯಕ್ಷ ತಮ್ಮಯ್ಯ ಮಾತನಾಡಿ, ಕಳೆದ 2 ವರ್ಷದಿಂದ ನಾನು ಕಾನೂರು ಗ್ರಾಮದಲ್ಲಿ ನಡೆಯುತ್ತಿರುವ ರೈತಕ್ಷೇತ್ರ ಪಾಠಶಾಲೆ  ಭಾಗವಹಿಸುತ್ತಾ  ಬಂದಿದ್ದು, ರೈತರಿಗೆ ಉಪಯುಕ್ತ ಕಾರ್ಯಕ್ರಮವಾಗಿದೆ. ರೈತರು ಆಸಕ್ತಿಯಿಂದ ರೈತ ಕ್ಷೇತ್ರ ಪಾಠಶಾಲೆಯಲ್ಲಿ ಭಾಗವಹಿಸಿದರೆ ಕೃಷಿ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಅಧ್ಯಕ್ಷತೆಯನ್ನು ಕಾನೂರು ಗ್ರಾಪಂ ಅಧ್ಯಕ್ಷ ಮಂಜುನಾಥ್ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ್ ಉಪಸ್ಥಿತರಿದ್ದರು. ಅರುಣ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement