ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪರಿಸರ ರಕ್ಷಣೆ ಎಲ್ಲರ ಹೊಣೆ

Lingaraj Badiger
Updated On : 12 Jul 2013, 10:49 am

ಚಿಕ್ಕಮಗಳೂರು: ಸಾಂದರ್ಭಿಕವಾಗಿ ನಮ್ಮ ಬದುಕಿಗೆ ಅನಿವಾರ್ಯವಾಗಿ ಅನ್ನ, ನೀರು, ಉಸಿರಾಡಲು ಗಾಳಿ ಸೇರಿದಂತೆ ಅವಶ್ಯಕವಾಗಿ ಸಿಗಬೇಕಾದರೆ ಮರಗಿಡಗಳಿದ್ದರೆ ಮಾತ್ರ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ಹಿರೇಮಗಳೂರಿನ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಭುಲಿಂಗ ಪ್ರೌಢಶಾಲಾ ಆವರಣದಲ್ಲಿ ಸ್ಥಳೀಯ ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಗುರುವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಸಸಿಯಾದರೂ ನೆಡಿ: ಪ್ರತಿಯೊಬ್ಬರು ಜೀವನದಲ್ಲಿ ಕನಿಷ್ಟ ಒಂದು ಗಿಡವನ್ನಾದರೂ ನೆಡುವುದರ ಮೂಲಕ ಪರಿಸರವನ್ನು ರಕ್ಷಿಸಬೇಕು. ಇಂದಿನ ದಿನಗಳಲ್ಲಿ  ಉಷ್ಣಾಂಶದಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಪರಿಸರವನ್ನು ಕಾಪಾಡಲು ಎಲ್ಲರೂ ಪಣ ತೊಡಬೇಕೆಂದು ಸಲಹೆ ನೀಡಿದರು.
ಪ್ರಾಮಾಣಿಕ ಪ್ರಯತ್ನ ಅಗತ್ಯ: ನಗರಸಭಾ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಸಸಿ ನೆಡುವುದು ಎಷ್ಟು ಮುಖ್ಯವೋ ಅದನ್ನು ಕಾಪಾಡಬೇಕಾದುದ್ದು ಅಷ್ಟೇ ಮುಖ್ಯ. ಶಾಲೆ ಊರಿನ ದೊಡ್ಡ ಆಸ್ತಿ ಅದನ್ನು ಉಳಿಸಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು.
ಪ್ರಸ್ತುತ ಸ್ಥಿತಿಯಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಮಾರಣಹೋಮ, ಅನಾಹುತ ನೋಡಿದರೆ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಅದನ್ನು ತಡೆಗಟ್ಟಲು ಪ್ರತಿಯೊಬ್ಬರು ಮನೆಗಳಲ್ಲಿ ಒಂದೊಂದು ಗಿಡ ನೆಡುವುದರ ಮೂಲಕ ಪರಿಸರ ರಕ್ಷಣೆಯ ಆಚರಣೆಗೆ ಒಂದು ಅರ್ಥ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.
ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಜಾನಯ್ಯ ಮಾತನಾಡಿ, ಸಸಿ ನೆಟ್ಟರೆ ಆ ಗಿಡ ನಮ್ಮನ್ನು ಸಾಕುತ್ತದೆ. ಪರಿಸರ ದೊಡ್ಡದಾಗಿ ಕಾಣಬೇಕಾದರೆ ಸಸಿ ನೆಡಬೇಕಾಗುತ್ತದೆ ಎಂದರು.
ಪ್ರಭುಲಿಂಗಸ್ವಾಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಪಿ. ಶ್ರೀಧರ್, ಶ್ರೀದೇವಿ ಯುವಕ ಸಂಘದ ಅಧ್ಯಕ್ಷ ಬಿ.ಎನ್. ಮೋಹನ್ ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯ ಚನ್ನಯ್ಯ ಮಾತನಾಡಿದರು.
ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹೆಚ್.ಇ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಎಸ್. ಮಲ್ಲೇಶ್, ಸದಸ್ಯ ಶಿವಪ್ರಸಾದ್, ಹೊಯ್ಸಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉಪಾಧ್ಯಕ್ಷ ಹೆಚ್.ಪಿ. ಪ್ರದೀಪ್ ಹಾಗೂ ಶಾಲಾ ಶಿಕ್ಷಕಿಯರು, ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಚಿರಂತ್ ಕುಮಾರ್ ಸ್ವಾಗತಿಸಿದರು, ಪುಷ್ಪರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement