ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಸೂಚನೆ

Vishwanath S
Updated On : 14 Jul 2013, 12:44 pm

ಕ.ಪ್ರ.ವಾರ್ತೆ  ಕಡೂರು  ಜು.13 ಈಗಲೋ ಆಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಖಾಸಗಿಯವರ ಬಾಡಿಗೆ ಮನೆಯಲ್ಲಿ ಸಣ್ಣ ಮಕ್ಕಳು ಕಲಿಯುತ್ತಿರುವ ಕಡೂರು ಕೋಟೆಯ ಅಂಗನವಾಡಿ ಕೇಂದ್ರವು ಮುಕ್ತಿ ಕಾಣುವ ಹಂತ ತಲುಪಿದೆ.
ಕಡೂರು ಪಟ್ಟಣದ ಕೋಟೆಯ ಅಗಳು ಪ್ರದೇಶದಲ್ಲಿರುವ ಅರಸು ಮಕ್ಕಳ ಬೀದಿಯಲ್ಲಿರುವ ಈ ಅಂಗನವಾಡಿ ಕೇಂದ್ರವನ್ನು ಕಳೆದ 4 ವರ್ಷದಿಂದ ಖಾಸಗಿ ಮನೆಯಲ್ಲಿ ಈ ಭಾಗದ ಸಾರ್ವಜನಿಕರೇ ರು. 500 ಬಾಡಿಗೆ ನೀಡುವ ಮೂಲಕ ಆರಂಭಿಸಿದ್ದರು.
ಸ್ಥಳಾಂತರಕ್ಕೆ ಮನವಿ: ಮುಖಂಡ ಮಹಮದ್ ಇಸ್ಮಾಯಿಲ್ ಹೆಳುವಂತೆ, ಸಂಬಂಧಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ  ಇಲಾಖೆಯಿಂದ ಈ ಕೇಂದ್ರಕ್ಕೆ ಯಾವುದೇ ಬಾಡಿಗೆ ಹಾಗೂ ಸರ್ಕಾರಿ ಸವಲತ್ತು ನೀಡುತ್ತಿಲ್ಲ. ಅಲ್ಲದೆ ಮಳೆಗಾಲದಲ್ಲಿ ಸೋರುತ್ತದೆ, ಅಕ್ಕಪಕ್ಕ ಕೋಟೆ ಪ್ರದೇಶದಲ್ಲಿ ಅಗಳು ಇರುವುದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ.
 ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಈ ಕೇಂದ್ರವನ್ನು ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಕೊಠಡಿಗೆ ಸ್ಥಳಾಂತರಿಸಿಕೊಡಬೇಕು ಎಂದು ಶಾಸಕರಿಗೆ ಮನವಿ ಮಾಡಿದ್ದೇವು ಎಂದರು.  
ಜನರ ಮನವಿ ಮೇರೆಗೆ ಶಾಸಕ ದತ್ತ ಈ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಸುಮಾರು 20 ಮಕ್ಕಳು ಕಲಿಯಲು ಬರುವ ಈ ಅಂಗನವಾಡಿ ಕೇಂದ್ರದ ಒಳಗೆ ಪ್ರವೇಶಿಸಿದ ಅವರು, ಕೇಂದ್ರದಲ್ಲಿರುವ ಅವ್ಯವಸ್ಥೆ ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಕ್ಷಣೆ ಕೊರತೆ: ನಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನಾಲ್ಕು ವರ್ಷದಿಂದ ಈ ಬಡಾವಣೆ ನಾಗರಿಕರು ಒಂದು ಬಾಡಿಗೆ ಮನೆಯನ್ನು ರು. 500 ರಂತೆ ನಿಗದಿಪಡಿಸಿ ಅಂಗನವಾಡಿ ಕೇಂದ್ರ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ಈ ಮನೆ ಸೋರುವ ಮೂಲಕ ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿ ಸೊಳ್ಳೆ ಕಾಟ ಹೆಚ್ಚಾಗಿರುವುದನ್ನು ವೀಕ್ಷಿಸಿದರು.  
ಆದರಿಂದ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳು ಖಾಲಿಯಿರುವುದು ತಿಳಿದಿದ್ದು, ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಒಂದು ಕೊಠಡಿ ಬಿಡಿಸಿಕೊಂಡು ಅಂಗನವಾಡಿ ಕೇಂದ್ರ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಅಂಗನವಾಡಿ ಕೇಂದ್ರವು ಸ್ಥಳಾಂತರಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಜಯಮ್ಮ, ಹಸೀನಾಬಾನು, ನೂರುಲ್ಲಾ ಶರೀಫ್, ಅಮೀರ್ ಜಾನ್, ಹೊನ್ನಪ್ಪ ಮೊದಲಾದರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement