ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ'

Vishwanath S
Updated On : 14 Jul 2013, 12:45 pm

ನರಸಿಂಹರಾಜಪುರ: ರೈತರು ಕೃಷಿ ಇಲಾಖೆಯ ಸಲಹೆ ಪಡೆದು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಬತ್ತದ ಇಳುವರಿ ಹೆಚ್ಚಾಗಲಿದೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್‌ತಿಳಿಸಿದರು.
 ಹಾತೂರು ಗ್ರಾಮದ ಕಂಡಿಕಾದಲ್ಲಿ ಇತ್ತೀಚಿಗೆ ಕೃಷಿ ಇಲಾಖೆಯ ಭೂ ಚೇತನ ಕಾರ್ಯಕ್ರಮದಡಿ ನೂತನವಾಗಿ ಪ್ರಾರಂಭಗೊಂಡ ರೈತ ಕ್ಷೇತ್ರ ಪಾಠ ಶಾಲೆ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಕ್ಷೇತ್ರ ಪಾಠಶಾಲೆಗೆ ಹೋದರೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದರು.    
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೀತೂರು ಗ್ರಾಪಂ ಸದಸ್ಯ ಎನ್.ಪಿ. ರಮೇಶ್ ಮಾತನಾಡಿ, ರೈತರು ಕೃಷಿ ಕಾರ್ಮಿಕರ ಸಮಸ್ಯೆ, ಹವಮಾನ ವೈಪರೀತ್ಯ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದು ಇದರಿಂದ ಕೃಷಿಯಲ್ಲಿ ಹೆಚ್ಚು ನಷ್ಟ ಉಂಟಾಗುತ್ತಿದೆ. ಗ್ರಾಮಗಳಲ್ಲೇ ಕೃಷಿ ಪಾಠ ಶಾಲೆ ಪ್ರಾರಂಭವಾಗಿರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಬಹುದು ಎಂದರು.
 ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ, ಬಾಳೆ, ಅಡಕೆ, ಸುವರ್ಣ ಗೆಡ್ಡೆ ಹಾಗೂ ಬತ್ತದ ಬೆಳೆಯಲ್ಲಿ ಬೀಜದ ಆಯ್ಕೆ ಮತ್ತು ಬೀಜೋಪಚಾರದ ಬಗ್ಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement