ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿತ್ತನೆ ಬತ್ತ ಉಚಿತ ವಿತರಣೆಗೆ ಒತ್ತಾಯ

Vishwanath S
Updated On : 14 Jul 2013, 12:44 pm

ನರಸಿಂಹರಾಜಪುರ: ರೈತರು ಬತ್ತದ ಬೆಳೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ರೈತರಿಗೆ ಉತ್ತೇಜನ ಮೂಡಿಸಲು ಕೃಷಿ ಇಲಾಖೆಯು ಉಚಿತವಾಗಿ ಬತ್ತದ ಬೀಜವನ್ನು ನೀಡುವಂತೆ ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದರು.
 ಕಡಹಿನಬೈಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಳದಮನೆ ಗ್ರಾಮದಲ್ಲಿ ಇತ್ತೀಚೆಗೆ ನಡೆದ ರೈತ ಕ್ಷೇತ್ರ ಪಾಠಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷಿ ಇಲಾಖೆಯ ಭೂ ಚೇತನ ಕಾರ್ಯಕ್ರಮದಡಿ ಪ್ರಾರಂಭಗೊಂಡಿರುವ ರೈತ ಕ್ಷೇತ್ರ ಪಾಠಶಾಲೆಯನ್ನು ರೈತರು ಸಮರ್ಪಕವಾಗಿ ಬಳಸಿಕೊಂಡರೆ ವರದಾನವಾಗಲಿದೆ. ಕೃಷಿ ಅಧಿಕಾರಿಗಳು ನೀಡುವ ವೈಜ್ಞಾನಿಕ ಮಾಹಿತಿ ಪಡೆದು ಕೃಷಿ ಮಾಡುವಂತೆ ರೈತರಿಗೆ ಸಲಹೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಮಾತನಾಡಿ, ಬತ್ತದ ಬೆಳೆಯಲ್ಲಿ ಬೀಜದ ಆಯ್ಕೆ ಪ್ರಮುಖ ಘಟ್ಟವಾಗಿದೆ. ಬತ್ತದ ಬೀಜವನ್ನು ಬೀಜೋಪಾಚಾರ ಮಾಡಿ ನಂತರ ಸಸಿ ಮುಡಿ ತಯಾರಿಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು, ಭೂ ಚೇತನ ಯೋಜನೆ ಬಗ್ಗೆ ವಿವರಿಸಿದರು. ಸಹಾಯಕ ಕೃಷಿ ಅಧಿಕಾರಿ ಶ್ರೀಧರ್ ಮಾತನಾಡಿದರು. ಎಚ್.ಎಸ್. ನವೀನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement