18ಕ್ಕೆ ಪ್ರತಿಭಟನೆ
ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಮುಗುಳುವಳ್ಳಿ ಗ್ರಾಮದಲ್ಲಿ ನಿಲ್ಲಿಸುವಂತೆ ಒತ್ತಾಯಿಸಿ ಜು. 18 ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ. ಚಿಕ್ಕಮಗಳೂರು- ಬೇಲೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ವೇಗದೂತ ಬಸ್ಸುಗಳು ಮುಗುಳವಳ್ಳಿ ಗ್ರಾಮದಲ್ಲಿ ಕೋರಿಕೆಯ ಮೇರೆಗೆ ನಿಲ್ಲಿಸಬೇಕೆಂದು ಸಂಸ್ಥೆ ಆದೇಶಿಸಿದೆ. ಆದರೂ ಕೆಲವೊಂದು ಬಸ್ಸುಗಳು ಈ ಗ್ರಾಮದಲ್ಲಿ ನಿಲ್ಲುತ್ತಿಲ್ಲವೆಂದು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್ ತಿಳಿಸಿದ್ದಾರೆ. ಈ ಗ್ರಾಮದಲ್ಲಿ ಹಲವಾರು ವಿದ್ಯಾರ್ಥಿಗಳು ಚಿಕ್ಕಮಗಳೂರಿನಲ್ಲಿ ವ್ಯಾಸಂಗಕ್ಕೆ ತೆರಳುತ್ತಾರೆ. ಬಸ್ಸುಗಳನ್ನು ಇಲ್ಲಿ ನಿಲ್ಲಿಸದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ವೇಗದೂತ ಬಸ್ಸುಗಳನ್ನು ಈ ಗ್ರಾಮದಲ್ಲಿ ನಿಲ್ಲಿಸುವಂತೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬ್ಯಾರವಳ್ಳಿ ಗ್ರಾಪಂ ವಾರ್ಡ್ ಸಭೆ
ಚಿಕ್ಕಮಗಳೂರು: ಬ್ಯಾರವಳ್ಳಿ ಗ್ರಾಪಂ ವ್ಯಾಪ್ತಿಯ ವಾರ್ಡ್ ಸಭೆ ಜು. 17 ರಂದು ಬೆಳಿಗ್ಗೆ 10 ಗಂಟೆಗೆ ನಿಡುಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಧ್ಯಾಹ್ನ 2 ರಿಂದ ಕೆಳಮಲ್ಲಂದೂರು ವಾರ್ಡ್ ಸಭೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 3 ಗಂಟೆಗೆ ಗ್ರಾಪಂ ಸಮುದಾಯಭವನದಲ್ಲಿ ಹಾಗೂ ಜು. 18 ರಂದು ಬೆಳಿಗ್ಗೆ 10 ಗಂಟೆಗೆ ಶಿವಗಂಗೆಯ ವಾರ್ಡ್ ಸಭೆಯು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಬೆಳಿಗ್ಗೆ 11.30ಕ್ಕೆ ಶಿರಗೂರು ವಾರ್ಡ್ ಸಭೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಹಾಗೂ ಮಧ್ಯಾಹ್ನ 2 ಗಂಟೆಗೆ ಮಾಕೋಡು ವಾರ್ಡ್ ಸಭೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. 19 ರಂದು ಬೆಳಿಗ್ಗೆ 11 ಗಂಟೆಗೆ ಬ್ಯಾರವಳ್ಳಿ, ಭಾಗಮನೆ, ಮಾಕೋಡು, ಶಿರಗೂರು, ಬಗನೆ ಹದ್ದಾಳು ಗ್ರಾಮಗಳ ಗ್ರಾಮಸಭೆ ಮಲ್ಲಂದೂರಿನ ಗ್ರಾಪಂ ಕಚೇರಿಯಲ್ಲಿ ನಡೆಯಲಿದೆ.